ಮತ್ತೊಂದು ವಿವಾದಕ್ಕೀಡಾದ ಶಾಸಕ ಹ್ಯಾರೀಸ್

ಬೆಂಗಳೂರು: ಯೋಧರು ಹುತಾತ್ಮರಾಗಿ ಇಡೀ ದೇಶ ದು:ಖದಲ್ಲಿರುವ ವೇಳೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಂತಿನಗರ ಶಾಸಕ ಹ್ಯಾರೀಸ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

ಶಾಸಕ ಎನ್ ಎ ಹ್ಯಾರಿಸ್ ಈಗ ತಮ್ಮ ಜನ್ಮದಿನಕ್ಕಾಗಿ ಸರ್ಕಾರಿ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡ ಆರೋಪಕ್ಕೆ ಸಿಲುಕಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಶಾಸಕರು ತಮ್ಮ ಹುಟ್ಟುಹಬ್ಬಕ್ಕಾಗಿ ಕ್ಷೇತ್ರದ ಮತದಾರರಿಗೆ ರಾತ್ರೋರಾತ್ರಿ ಕಂಬಳಿಗಳನ್ನು ವಿತರಣೆ ಮಾಡಿದ್ರು. ಆದರೆ ಈ ಕಂಬಳಿಗಳನ್ನು ಅವರ ಕ್ಷೇತ್ರದಲ್ಲಿ ಬರುವ ಜೋಗುಪಾಳ್ಯದಲ್ಲಿರುವ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶೇಖರಣೆ ಮಾಡಿಟ್ಟಿದ್ದರು ಎನ್ನಲಾಗಿದೆ.

ಕಂಬಳಿಗಳ ರಾಶಿಯನ್ನು ಶಾಲೆಯ ಕೊಠಡಿಯಲ್ಲಿ ಇಡಲಾಗಿತ್ತು. ಇದರಿಂದ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೊಠಡಿಯಿಲ್ಲದೆ ಪಾಠಕ್ಕೆ ತೊಂದರೆಯಾಗಿದೆ. ಅಲ್ಲದೇ ರಾತ್ರಿ ವೇಳೆಯಲ್ಲೂ ಕ್ಷೇತ್ರದ ಮತದಾರರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಶಾಲೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ