ಬೀದರ್, ಕಲಬುರಗಿ ಸೇರಿದಂತೆ ಕನಿಷ್ಟ 22 ಸೀಟು ಪಡೆಯುವ ಮೂಲಕ ಮೋದಿ ಪ್ರಧಾನಿಯಾದ 24 ಗಂಟೆಗಳಲ್ಲಿ ಈ‌ ಮೈತ್ರಿ ಸರ್ಕಾರ ಉಳಿಯಲ್ಲಾ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಬೀದರ್: ಫೆ. 22. ವಿಧಾನ ಸಭೆ ವಿರೋಧ ಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿಎಸ್‌ ಯಡಿಯೂರಪ್ಪನವರು ಹುಮನಾಬಾದ್ ನಲ್ಲಿ ಆಯೋಜಿಸಲಾಗಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮತ್ತೆ ಆಪರೇಷನ್ ಕಮಲ ಶುರುವಾಗಿದೆಯಾ‌‌‌‌..? ಷಾ ಮಾತಿಗೂ ಯಡಿಯೂರಪ್ಪ‌ ಕ್ಯಾರೆ ಎನ್ನುತ್ತಿಲ್ವಾ..? ಹೌದು ಬೀದರ್ ನಲ್ಲಿ ಪರೋಕ್ಷವಾಗಿ ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಪ್ರಸ್ತಾಪ ಮಾಡಿದ್ದಾರೆ… ಲೋಕಸಭಾ ಚುನಾವಣೆ ಬಳಿಕ ಈ ಮೈತಿ ಸರ್ಕಾರ ಇರಲ್ಲಾ‌… ಬೀದರ್, ಕಲಬುರಗಿ ಸೇರಿದಂತೆ ಕನಿಷ್ಟ ೨೨ ಸೀಟು ಪಡೆಯುವ ಮೂಲಕ ಮೋದಿ ಪ್ರಧಾನಿಯಾದ ೨೪ ಗಂಟೆಗಳಲ್ಲಿ ಈ‌ ಮೈತ್ರಿ ಸರ್ಕಾರ ಉಳಿಯಲ್ಲಾ ಎಂದು ಬೀದರ್ ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ…

ಬಿಎಸ್ ವೈ ಈ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಇರಲ್ಲಾ ಎಂದು ಷಾ ಹೇಳಿದ್ರು ತೆರೆ ಮರೆಯಲ್ಲಿ ಬಿಎಸ್ ವೈ ಆಪರೇಷನ್‌ ಕಮಲ ಕಸರತ್ತು ಮಾಡುತ್ತಿದ್ದಾರಾ ಎಂಬ ಪ್ರಶ್ನ ಮೂಡುತ್ತಿದೆ‌… ಇನ್ನು ಅವರ ಅಪ್ಪನಾಣೆಗೂ ಮೋದಿ ಪ್ರಧಾನಿ ಯಾಗಲ್ಲಾ ಎಂದು ಸಿದ್ದರಾಮಯ್ಯ ಹೇಳಿಕೆ ಗೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್ ನಿಮ್ಮ ಅಪ್ಪನಾಣೆಗೂ ಮೋದಿ ಪ್ರಧಾನಿಯಾಗತ್ತಾರೆ ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ್ರು‌.. ಬಳಿಕ ಮಾಜಿ ಡಿಸಿಎಂ ಆರ್ ಅಶೋಕ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸಿದ್ದರಾಮಯ್ಯ ದುರಂಕಾರದ ಪ್ರತಿರೂಪ… ಮೋದಿ ಅವರಪ್ಪನಾಣೆಗೂ ಪ್ರಧಾನಿಯಾಗಲ್ಲಾ ಎಂದು ಸಿದ್ದರಾಮಯ್ಯ ಹೇಳತ್ತಾರೆ‌… ಆದ್ರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲಾ ಅಂಥಾ ಹೇಳಲಿ ನೋಡೋಣ‌… ಸಿದ್ದರಾಮಯ್ಯ ಹೇಳಿದ್ರೆ ಎಲ್ಲಾ ಉಲ್ಟಾ ಆಗುತ್ತೆ… ಕುಮಾರಸ್ವಾಮಿ ಸಿಎಂ ಆಗಲ್ಲಾ ಎಂದು ಹಿಂದೆ ಸಿದ್ದರಾಮಯ್ಯ ಹೇಳಿದ್ರು‌ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಆರ್ ಅಶೋಕ್ ತೀವ್ರ ವಾಗ್ದಾಳಿ ನೆಡೆಸಿದರು‌…

ಈ ವೇಳೆ ಕೇಂದ್ರ ಸಚಿವರಾದ ಪುರುಷೋತ್ತಮ್‌ ರೂಪಾಲಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್‌ ಶೆಟ್ಟರ್‍,ವಿಧಾನ ಸಭೆ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಗೋವಿಂದ್‌ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾಜೀ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್, ಮಾಜಿ ಸಚಿವರಾದ ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ್‌, ಸಂಸದರಾದ ಭಗವಂತ್‌ ಖೂಬಾ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ