ತಾಯಿ ಚಿತೆಗೆ ಆಗ್ನಿ ಸ್ಪರ್ಶ ಮಾಡು ವಾಗ ಹೃದಯಾ ಘಾತದಿಂದ ಮೃತಪಟ್ಟ ಮಗ

ಉತ್ತರಕನ್ನಡ ಜಿಲ್ಲೆ, ಫೆ.20- ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡುವಾಗ ಹೃದಯಾ ಘಾತದಿಂದಾಗಿ ಮಗ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಿದ್ಧರಗ್ರಾಮದ ನಿವಾಸಿ ಮಂಜುನಾಥ್ ಕೊಳಂಬರ ಮೃತ ಮಗ.

ಮಂಜುನಾಥ ತಾಯಿ ಸಾವಿತ್ರಿ ಮೃತಪಟ್ಟಿದ್ದರು. ಅವರ ಸಾವಿನಿಂದ ತೀವ್ರವಾಗಿ ನೊಂದಿದ್ದ ಮಂಜುನಾಥ್ ತಾಯಿ ಅಗಲಿಕೆಯಿಂದ ಕಂಗಾಲಾಗಿದ್ದರು. ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಮಗ ಮಂಜುನಾಥ್ ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಮಂಜುನಾಥ್‍ನನ್ನು ಸ್ಥಳೀಯ ಆಸ್ಪತ್ರೆಗೆದಾಖಲು ಮಾಡಿ ಪರೀಕ್ಷಿಸಲಾಗಿದೆ.

ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಸಂಬಂಧ ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರ ಣದಾಖಲಾಗಿದೆ.
ದಾರುಣ ಸನ್ನಿವೇಶಕಂಡ ಸಂಬಂಧಿಕರು ಮಮ್ಮಲ ಮರುಗಿದರು. ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ