11ನೇ ಕುಂಭ ಮೇಳಕ್ಕೆ ಕ್ಷಣ ಗಣನೆ ಆರಂಭ

ತಿ.ನರಸೀಪುರ ಫೆ.16- ದಕ್ಷಿಣ ಭಾರತದ 11ನೇ ಕುಂಭ ಮೇಳಕ್ಕೆ ಕ್ಷಣಗಣನೆಆರಂಭವಾಗಿದ್ದು, ಅಂತಿಮಸಿದ್ಧತೆಗಳು ಮುಕ್ತಾಯ ಹಂತದಲ್ಲಿದೆ. ತ್ರಿವೇಣಿ ಸಂಗಮದ ಮಧ್ಯ ಭಾಗದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ ಅಂತಿಮ ರೂಪ ನೀಡಲಾಗುತ್ತಿದೆ.

ಈಗಾಗಲೇ ಭಾರತೀಯ ಸೇನೆಯ ಯೋಧರು ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲ ನದಿಗೆ ಅಡ್ಡಲಾಗಿತೂಗು ಸೇತುವೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.

ಭಾರತೀಯ ಸೇನೆಯ ಮೇಜರ್‍ಜನರಲ್ ಕೆ.ಜೆ.ಬಾಬು ಇಂದುತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಸೇನೆಯ ಯೋಧರು ನಿರ್ಮಿಸಿರುವ ತೂಗು ಸೇತುವೆಯ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಅಭಿರಾಮ್ ಶಂಕರ್ ಸೇತುವೆ ವೀಕ್ಷಿಸಿ ಯೋಧರಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಿಟೀಲು ಚೌಡಯ್ಯ ವೃತ್ತದಿಂದ ಅಗಸ್ತ್ಯೇಶ್ವರ ದೇವಾಲಯದವರೆಗಿನ ಮಣ್ಣಿನ ರಸ್ತೆಗೆ ಡಾಂಬರು ಹಾಕಿ ಹದಗೊಳಿಸಲಾಗಿದೆ. ಸೆಸ್ಕಾಂ ಇಲಾಖೆಯವರು ಮೇಳದ ಸ್ಥಳದಲ್ಲಿ ನೂತನವಾಗಿಟ್ರಾನ್ಸ್ ಫಾರ್ಮರ್ ಅಳವಡಿಸಿ ವಿದ್ಯುತ್‍ಕೊರತೆಯಾಗದಂತೆಕ್ರಮಕೈಗೊಂಡಿದ್ದಾರೆ.

ಇದೇ ಮೊದಲ ಬಾರಿಗೆಜಿಲ್ಲಾಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರಆದೇಶದಂತೆ ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ರುದ್ರಪಾದಕ್ಕೆ ಮರಳಿನ ಮೂಟೆಯ ಸೇತುವೆ ನಿರ್ಮಾಣ ಮಾಡಿದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ದೇವಾಲಯಗಳಿಗೆ ಸುಣ್ಣ ಬಣ್ಣತುಂಬಿ ಅಂದ ಕಾಣುವಂತೆ ಮಾಡಲಾಗಿದೆ.ಪಟ್ಟಣದ ಪ್ರಮುಖ ರಸ್ತೆಗಳು, ಸರ್ಕಾರಿ ಕಛೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಪಟ್ಟಣದ ನಾಲ್ಕುಕಡೆ ಮಾತ್ರ ಮೇಳದ ಸ್ವಾಗತದ ಪ್ಲೆಕ್ಸ್‍ಗಳನ್ನು ಮಾತ್ರ ಅಳವಡಿಸಿದ್ದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನವಾದಂತೆ ಸರ್ಕಾರಿ ಸಾರಿಗೆ ಸಂಸ್ಥೆಯವರುಒಂದೇ ಒಂದು ಪೋಸ್ಟರ್‍ಗಳನ್ನು ಕೂಡ ಬಸ್‍ಗಳ ಮೇಲೆ ಹಾಕಿಲ್ಲದಿರುವುದನ್ನು ನೋಡಿದಾಗ ಕೇವಲ ಪಟ್ಟಣದ ಜನತೆಗೆ ಮಾತ್ರ ಕುಂಭಮೇಳ ಸೀಮಿತವಾಗಿದೆಯೆ ಎಂಬ ಪ್ರಶ್ನೆ ಮೂಡಿದೆ.

ಕುಂಭಮೇಳದ ಹೆಸರಿನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಲ್ಲಾ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸುವ ಮೂಲಕ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಾರದ ಸ್ವಾಮೀಜಿಗಳು: ಕುಂಭಮೇಳಕ್ಕೆ ಮೂಲ ಕಾರಣಕರ್ತರಾದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಜಿ, ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ,ಓಂಕಾರಾಶ್ರಮದ ಮಧುಸೂದನ ನಂದಪುರಿ ಮಹಾಸ್ವಾಮಿಗಳು ಹಾಗು ಕೈಲಾಸಾಶ್ರಮದ ಜಯೇಂದ್ರಪುರಿ ಮಹಾಸ್ವಾಮಿಗಳು ಕುಂಭಮೇಳಕ್ಕೆ ಕೇವಲ ಒಂದೇಒಂದು ದಿನ ಬಾಕಿ ಇದ್ದಾಗಿಯೂತ್ರಿವೇಣಿ ಸಂಗಮದಕಡೆಗೆ ಸುಳಿಯದಿರುವುದು ಭಕ್ತಾದಿಗಳಲ್ಲಿ ನಿರಾಸೆಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ