ರೈಲಿಗೆ ಸಿಲುಕಿ ಯುವಕನ ಸಾವು

ಬೆಂಗಳೂರು, ಫೆ.16- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 25 ವರ್ಷದಂತೆ ಕಾಣುವ ಈ ಯುವಕನ ಹೆಸರು, ವಿಳಾಸ ತಿಳಿದು ಬಂದಿಲ್ಲ.

ಸೋಮೇಶ್ವರ-ಗೌರಿ ಬಿದನೂರು ರೈಲ್ವೆ ನಿಲ್ದಾಣಗಳ ಮಧ್ಯೆ ಹಾದು ಹೋಗುವ ರೈಲ್ವೆ ಹಳಿ ಬಳಿ ಈತ ನಿನ್ನೆ ಸಂಜೆ ಯಾವುದೋ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.

ಕೆಂಪು ಬಣ್ಣದತುಂಬು ತೋಳಿನ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುವ ಈ ಯುವಕನ ಮೃತದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

ವಾರಸುದಾರರು ಯಶವಂತಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ