ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀಛತ್ರಪತಿ ಶಿವಾಜಿ ಜಯಂತಿ

ಬೆಂಗಳೂರು, ಫೆ.15-ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.29 ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಮರಾಠಾ ಶ್ರೀಛತ್ರಪತಿ ಶಿವಾಜಿ ಮಹಾರಾಜï ಸೇನೆ ಅಧ್ಯಕ್ಷ ಮಾರುತಿ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗೋಸಾಯಿ ಮಹಾಸಂಸ್ಥ್ಧಾನ ಮಠದ ಶ್ರೀ ಮಂಜುನಾಥಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜಲಸಂಪನ್ಮ್ಮೂಲ ಸಚಿವ ಡಿ.ಕೆ. ಶಿವಕುಮಾರ್‍ಉದ್ಘಾಟಿಸಲಿದ್ದು, ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ , ಶಾಸಕರಾದ ಉದಯ ಗರುಡಾಚಾರ್ ,ಅನಿಲ ಬೆನಕೆ, ಅಂಜಲಿ ನಿಂಬಾಳ್ಕರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 50ಲಕ್ಷಕ್ಕೂ ಹೆಚ್ಚು ಮರಾಠಾ ಜನಾಂಗದವರಿದ್ದು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಆದ್ದರಿಂದ ನಮ್ಮ ಜನಾಂಗದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ಮಂಡಿಸಿರುವ ಪ್ರಸ್ತುತ ಬಜೆಟ್‍ನಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ.ಆದ್ದರಿಂದ ನಮ್ಮ ಸಮುದಾಯಕ್ಕೆ 25ಕೋಟಿ ಅನುದಾನ ನೀಡಬೇಕು, ಮರಾಠಾ ಜನಾಂಗದಲ್ಲಿ 32 ಪಂಗಡಗಳಿದ್ದು 27 ಪಂಗಡಗಳನ್ನು ಪ್ರವರ್ಗ – ಎ ನಲ್ಲಿ ಸೇರಿಸಲಾಗಿದೆ. ಬಾಕಿ ಉಳಿದ 5 ಪಂಗಡಗಳನ್ನು ಪ್ರವರ್ಗ-ಎ ಗೆ ಸೇರಿಸಬೇಕು ಹಾಗೂ ಅಧ್ಯಯನ ಪೀಠವನ್ನು ಸ್ಧಾಪಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಸಿಂಗ್, ಕಾರ್ಯಾಧ್ಯಕ್ಷ ರವೀಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ