ಫೆ.20ರಿಂದ ನಡೆಯಲಿರುವ ಏರೋ ಇಂಡಿಯಾ-2019

ಬೆಂಗಳೂರು, ಫೆ.14-ಉದ್ಯಾನನಗರಿ ಬೆಂಗಳೂರಿನಲ್ಲಿ ಫೆ.20ರಂದು ಆರಂಭವಾಗಲಿರುವ 12ನೇ ವಾರ್ಷಿಕ ಏರೋ ಇಂಡಿಯಾ-2019ರಲ್ಲಿ ಹತ್ತು ಹಲವು ಹೊಸತನದ ನಡುವೆ ಡ್ರೋಣ್ ಒಲಿಂಪಿಕ್ಸ್ ಎಲ್ಲರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.ಮೂರು ವಿಭಾಗಗಳಲ್ಲಿ ನಡೆಯುವ ವೈಮಾನಿಕ ಸ್ಪರ್ಧೆ ಅಪಾರ ಕುತೂಹಲ ಕೆರಳಿಸಿದೆ.

ದೇಶ-ವಿದೇಶಗಳ ಮಾನವರಹಿತ ಹಾರುವ ಯಂತ್ರಗಳು ಮತ್ತು ಡ್ರೋಣ್‍ಗಳು ಈ ವಿಶೇಷ ಒಲಿಂಪಿಕ್ಸ್‍ನಲ್ಲಿ ತಮ್ಮ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶಕ್ತಿ-ಸಾಮಥ್ರ್ಯ ಪ್ರದರ್ಶಿಸಲಿವೆ.

ಸಿಲಿಕಾನ್ ಸಿಟಿಯ ಯಲಹಂಕ ವಾಯು ಪಡೆ ನೆಲೆಯಲ್ಲಿ ಫೆ.20ರಿಂದ ಐದು ದಿನಗಳ ಕಾಲ ನಡೆಯುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದಲ್ಲಿ ಡ್ರೋಣ್‍ಗಳು ವಿಶೇಷ ಆಕರ್ಷಣೆಯಾಗಲಿವೆ. ದೇಶ-ವಿದೇಶಗಳ ಪ್ಲೇಯರ್‍ಗಳು ತಮ್ಮ ಹೈಟೆಕ್ ಡ್ರೋಣ್‍ಗಳನ್ನು ಇಲ್ಲಿ ಹಾರಿಸಿ ಗಮನ ಸೆಳೆಯಲಿದ್ದಾರೆ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವಿಟ್ ಮಾಡಿದ್ದಾರೆ.

ಫೆ.21ರಂದು ಡ್ರೋಣ್ ಒಲಿಂಪಿಕ್ಸ್‍ಗೆ ವೇದಿಕೆ ಸಜ್ಜಾಗಿದೆ.ಮಾನವಹರಿತ ವೈಮಾನಿಕ ವಾಹನಗಳ ತಯಾರಕರು ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಲು ಇಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಮಾನವ ರಹಿತ ಹಾರುವ ಯಂತ್ರಗಳ (ಯುಎವಿ) ಕಣ್ಗಾವಲು ಸಾಮಥ್ರ್ಯಗಳನ್ನು ಪರೀಕ್ಷಿಸುವ ಸವಾಲು, ಡ್ರೋನ್‍ಗಳ ಭಾರ ಇಳಿಸುವ ಸಾಮಥ್ರ್ಯದ ಸ್ಫರ್ಧೆ ಹಾಗೂ ಸಮೂಹ ಡ್ರೋನ್‍ಗಳೊಂದಿಗೆ ಗಗನದಲ್ಲಿ ಚಿತ್ತಾರ ಬಿಡಿಸುವ ಹಾರಾಟದ ಪೈಪೋಟಿ ವಿಶೇಷ ಆಕರ್ಷಣೆಯಾಗಲಿದೆ.

ದೇಶ-ವಿದೇಶಗಳಿಂದ 121 ಅರ್ಜಿಗಳು ಬಂದಿದ್ದು, 57 ಡ್ರೋಣ್‍ಗಳ ಆಯ್ಕೆಗಾಗಿ ಫೆ.18 ಮತ್ತ 19ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
ಫೆ.21ರಂದು ಬೆಳಗ್ಗೆ 10 ಗಂಟೆಗೆ ಫೈನಲ್ ಸ್ಪರ್ಧೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ