ಝೂಗಲ್ ಸಂಸ್ಥೆಯಿಂದ ಈಗ ಗ್ರಾಹಕರಿಗೆ ಆರೋಗ್ಯ ಸೇವೆ ಲಭ್ಯ: ಸಂಸ್ಥೆಯ ಸಿಇಒ ಅವಿನಾಶ್ ಗೋಖಾಂಡಿ

ಬೆಂಗಳೂರು, ಫೆ.13- ನಗದು ವ್ಯವಹಾರಕ್ಕೆ ಬದಲಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವಸ್ತುಗಳನ್ನು ಕೊಳ್ಳುವ ಸೇವೆ ಒದಗಿಸುವ ಝೂಗಲ್ ಈಗ ಆರೋಗ್ಯ ಸೇವೆಯನ್ನು ಕೂಡ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಉಡುಗೊರೆ ಮತ್ತು ಮಾಲ್‍ಗಳಲ್ಲಿ ವಿವಿಧ ವಸ್ತುಗಳ ಖರೀದಿಗಾಗಿ ಸಂಸ್ಥೆ ನೀಡುತ್ತಿದ್ದ ಕಾರ್ಡ್ ಅನ್ನು ಈಗ ಆರೋಗ್ಯ ಹಾಗೂ ಸೌಂದರ್ಯವರ್ಧಕಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ದೇಶಾದ್ಯಂತ ಎಲ್ಲಾ ವಿಎಲ್‍ಸಿಸಿಯಲ್ಲೂ ತಡೆ ರಹಿತವಾಗಿ ಸೇವೆ ಪಡೆಯಬಹುದಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವಿನಾಶ್ ಗೋಖಾಂಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊಸ ಝೂಗಲ್ ವಿಎಲ್‍ಸಿಸಿ ಗಿಫ್ಟ್ ಕಾರ್ಡ್‍ನಲ್ಲಿ ನಾವು ವಿಶ್ವ ದರ್ಜೆಯ ಸೇವೆಯನ್ನು ಒದಗಿಸಲಾಗುತ್ತಿದ್ದು , ಇದನ್ನು ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬಹುದು ಎಂದು ಇದೇ ವೇಳೆ ಸಂಸ್ಥೆಯ ಉಪಾಧ್ಯಕ್ಷೆ ಮೋನಿಕಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ