ಶಾಸಕ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ : ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಫೆ.10-ಶಾಸಕ ಆನಂದ್‍ಸಿಂಗ್ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ. ಅವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗಣೇಶ್ ಅಧಿವೇಶನಕ್ಕೂ ಬಂದಿಲ್ಲ. ಅಂಡಮಾನ್ ನಿಕೋಬಾರ್‍ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ವಿಪ್ ಕೂಡ ಜಾರಿಯಾಗಿದೆ. ಅವರನ್ನು ಬಂಧಿಸುತ್ತೇವೆ ಎಂದರು.

ನಮ್ಮ ಇಲಾಖೆಯಲ್ಲಿ ಯಾರೂ ಗಣೇಶ್ ಸಂಪರ್ಕದಲ್ಲಿ ಇಲ್ಲ. ಅವರು ಬಿಜೆಪಿ ರಕ್ಷಣೆಯಲ್ಲಿದ್ದಾರೆ ಎಂದು ಹೇಳಿದರು.

ಪೆÇಲೀಸ್ ಇಲಾಖೆಗೆ ಬಜೆಟ್‍ನಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಹೊಸ ಜೈಲು ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದರು.

ಪೆÇಲೀಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಒಳ್ಳೆಯ ಅಧಿಕಾರಿಯನ್ನು ನೇಮಿಸಲಾಗುವುದು. ಹೊಸ ಠಾಣೆಗಳ ನಿರ್ಮಾಣ ಸದ್ಯಕ್ಕಿಲ್ಲ. ಒಟ್ಟಾರೆ ಪೆÇಲೀಸ್ ಇಲಾಖೆಯಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ ಇವೆ. ಮುಂಬೈ ಫೆÇೀರ್ಸ್ ಹಾಗೂ ಆಂಧ್ರದ ಆಕ್ಟೋಪಸ್ ಫೆÇೀರ್ಸ್ ಬಹಳ ಶಕ್ತಿಯಾಗಿವೆ.

ನಮ್ಮ ರಾಜ್ಯದ ಗರುಡ ಪಡೆಯೂ ಕೂಡ ಅವುಗಳಂತೆ ಆಗಬೇಕೆಂದು ಇದೇ ವೇಳೆ ಪಾಟೀಲ್ ತಿಳಿಸಿದರು.

ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಆಗಬೇಕೆಂಬ ಒತ್ತಾಯವಿದ್ದು, ಮುಖ್ಯಮಂತ್ರಿಗಳು ದ್ರಾಕ್ಷಿ ಬೆಳೆಗಾರರ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಐಆರ್‍ಬಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಚಿಂತನೆ ಮಾಡಿದ್ದೇವೆ. ಭೂತನಾಳು ಕೆರೆ ಅಭಿವೃದ್ಧಿಗೆ 9.13 ಲಕ್ಷ ಬಿಡುಗಡೆಯಾಗಿದೆ. ಇನ್ನೂ 4 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ