ಉತ್ತಮರು, ವಿಚಾರವಂತರು ಮೌನವಾಗಿದ್ದರೆ ದೇಶಕ್ಕೆ ಅಪಾಯ: ಶಿಕ್ಷಣ ತಜ್ಞ ಹಾಗೂ ಬಿಜೆಪಿ ನಾಯಕ ಡಾ.ಎಚ್.ಎಂ.ಚಂದ್ರಶೇಖರ್

ಬೆಂಗಳೂರು, ಫೆ.10-ಉತ್ತಮರು, ವಿಚಾರವಂತರು ಮೌನವಾಗಿದ್ದರೆ ದೇಶಕ್ಕೆ ದೊಡ್ಡ ಅಪಾಯ. ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ಜನ ಸಕ್ರಿಯವಾಗಿ ಭಾಗಿಯಾಗದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಚಿಂತಕ, ಶಿಕ್ಷಣ ತಜ್ಞ, ಬಿಜೆಪಿ ನಾಯಕ ಡಾ.ಎಚ್.ಎಂ.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.
ನಗರದ ಅರಮನೆ ಮೈದಾನದ ಕರ್ನಾಟಕ ಕಂಟ್ರಾಕ್ಟರ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಭವಿಷ್ಯದ ಭಾರತ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತದ ಮೂರನೇ ತಲೆಮಾರಾದ ನಾವು ಎಚ್ಚೆತ್ತುಕೊಳ್ಳಬೇಕು, ನಿಷ್ಕ್ರಿಯವಾಗದೆ ಸಕ್ರಿಯರಾಗಬೇಕು ಎಂದರು.

ದೇಶದ ಮಹಾಚುನಾವಣೆ ಸಮೀಪಿಸುತ್ತಿದೆ.ಈ ಸನ್ನಿವೇಶದಲ್ಲಿ ದೇಶ ಮುನ್ನಡೆಯುವ ಮಾರ್ಗವನ್ನು ನಿರ್ಧರಿಸಬೇಕಾದವರು ನಾವು.ದೇಶದ ಜೆಡಿಪಿಯಲ್ಲಿ ಚಹ ಮಾರುವವನು, ತಳ್ಳುಗಾಡಿ ವ್ಯಾಪಾರ ಮಾಡುವವನು, ಕೂಲಿಕಾರ, ಕಟ್ಟಕಡೆಯ ಕಾರ್ಮಿಕನ ಕೊಡುಗೆಯೂ ಇದೆ.ಎಲ್ಲರ ದುಡಿಮೆಯ ಫಲದಿಂದ ಇಂದು ದೇಶ ನಡೆಯುತ್ತಿದೆ ಎಂಬುದರ ಅರಿವು ನಾಗರಿಕಗಿರಬೇಕು.

ಬೆಂಗಳೂರಿನಿಂದ ವಿಷವನ್ನು ಕೋಲಾರ, ಚಿಕ್ಕಬಳ್ಳಾಪುರ ಕ್ಕೆ ಕೆಸಿ ವ್ಯಾಲಿ, ಎಚ್ ಎನ್ ವ್ಯಾಲಿ ಮೂಲಕ ಹರಿಸಲಾಗುತ್ತಿದೆ, ಇದನ್ನು ಪ್ರಶ್ನೆ ಮಾಡುವ ಪ್ರಜ್ಞೆ ಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಮಾತನಾಡಿ, ಪ್ರಪಂಚಕ್ಕೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಕೊಡುಗೆ ನೀಡಿದ ಭಾರತದಂತಹ ರಾಷ್ಟ್ರದ ಪ್ರಜೆಗಳು ನಾವೆಂದು ಎದೆಯುಬ್ಬಿಸಿ ಹೇಳವಂತಾಗಬೇಕು.

ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿ ದೇಶಪ್ರಜ್ಞೆ ಜಾಗೃತವಾಗವೇಕು ಎಂದು ಕರೆ ನೀಡಿದರು.

ಇಂದು ದೇಶದ ಶಿಕ್ಷಣ ವ್ಯವಸ್ಥೆ ವ್ಯಾಪರೀಕರಣ ಆಗಿದೆ, ರಾಜಕೀಯ ವ್ಯವಸ್ಥೆ ಕೊಳೆತು ನಾರುತ್ತಿದೆ. ಭಾರತದ ಭವಿಷ್ಯಕ್ಕೆ ಪ್ರಜ್ಞಾವಂತ ಯುವಜನರ ಅಗತ್ಯವಿದೆ ಎಂದರು.

ಭಾರತೀಯ ಸೇನೆಯ ನಿವೃತ್ತ ಜನರಲï ಕಾಮತ್, ಮಾಜಿ ಪರಿಷತ್ ಸದಸ್ಯ ಅಬ್ದುಲ್ ಅಜೀಂ, ವಕ್ಕಲಿಗರ ಸಂಘದ ಸದಸ್ಯ ನಾಗರಾಜು ,ಡಾ.ಶರ್ಮ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ