ಜ್ಯೇಷ್ಠತೆ ಅನ್ವಯ ರದ್ದಾಗಿರುವ ಹಿಂಬಡ್ತಿ-ಮುಂಬಡ್ತಿ ಅನ್ನು ಕಡ್ಡಾಯವಾಗಿ ನಮೂದಿಸಬೇಕು: ಎಸ್‍ಸ್ಸಿ-ಎಸ್‍ಸ್ಟಿ ಮಠಾಧೀಶರುಗಳ ಒತ್ತಾಯ

ಬೆಂಗಳೂರು, ಫೆ.5-ರಾಜ್ಯ ಸರ್ಕಾರ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ನ್ನು ಅನುಷ್ಠಾನಗೊಳಿಸಿ ಕೂಡಲೇ ಹಿಂಬಡ್ತಿ ಆದೇಶಗಳನ್ನು ವಾಪಸ್ ಪಡೆದು ಕಾರ್ಯಾದೇಶ ಹೊರಡಿಸಬೇಕೆಂದು ಕರ್ನಾಟಕ ರಾಜ್ಯಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಠಾಧೀಶರುಗಳ ಒಕ್ಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ , ಕರ್ನಾಟಕ ರಾಜ್ಯ ಪತ್ರದಲ್ಲಿ ಕಾಯ್ದೆ ಜಾರಿಯಾದ ಕಾರಣ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಬಹಿಷ್ಕರಿಸುವ ಎಲ್ಲಾ ಜ್ಯೇಷ್ಠತೆ ರದ್ದಾಗಿದ್ದು, ಸದರಿ ಜ್ಯೇಷ್ಠತೆ ಮೇಲೆ ನೀಡಿರುವ ಎಲ್ಲಾ ಹಿಂಬಡ್ತಿ -ಮುಂಬಡ್ತಿ ರದ್ದಾಗಿರುವುದನ್ನು ಕಡ್ಡಾಯವಾಗಿ ನಮೂದಿಸಬೇಕು. ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರನ ಜ್ಯೇಷ್ಠತೆಯನ್ನು ಒಂದು ವೃಂದದಲ್ಲಿ ಸಲ್ಲಿಸಿದ ಸೇವಾ ಅವಧಿಯ ಆಧಾರದ ಮೇಲೆ ಬಡ್ತಿ ಹೊಂದಿರುತ್ತಾರೆಯೋ ಆ ವೃಂದದಲ್ಲೇ ಅದರ ಜ್ಯೇಷ್ಠತೆ ನಿರ್ಧರಿಸಬೇಕು ಎಂದರು.

ಹಿಂಬಡ್ತಿ ಹೊಂದಿದ ನಂತರ ನಿವೃತ್ತರಾಗಿರುವವರು, ಮರಣ ಹೊಂದಿರುವವರು ಹಿಂಬಡ್ತಿ ಪೂರ್ವದಲ್ಲಿಯೇ ಹುದ್ದೆಯಲ್ಲಿಯೇ ನಿವೃತ್ತಿ/ ಮರಣ ಹೊಂದಿದ್ದಾರೆ ಎಂದು ಭಾವಿಸತಕ್ಕದ್ದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿ ದೇವ ಮಹಾಸ್ವಾಮಿ, ಹಿರಿಯೂರಿನ ಆದಿಜಾಂಬವ ಮಹಾಸಂಸ್ಥಾನ ಮಠದ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ, ಮುಡುಪುತೆರೆ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ