ಎಚ್ಎಎಲ್ ವಿಮಾನ ದುರಂತ ಪ್ರಕರಣ; ತನಿಖೆಗೆ ಆದೇಶಿಸಿದ ವಾಯುಪಡೆ

ಬೆಂಗಳೂರುಶುಕ್ರವಾರ ಬೆಂಗಳೂರಿನ ಎಚ್​​ಎಎಲ್​ ಸಮೀಪ ನಡೆದ ಮಿರಾಜ್​​ 2000 ತರಬೇತಿ ಯುದ್ಧ ವಿಮಾನ ಪತನಗೊಂಡ ಪ್ರಕರಣಕ್ಕೆ ಸಂಬಂಧಿಸಿ ವಾಯುಪಡೆ ತನಿಖೆಗೆ ಆದೇಶಿಸಿದೆ.

ಎಚ್​ಎಎಲ್​ ಒಳಗೆ ವಿಮಾನ ಹಾರಾಟ ನಡೆಸುವಾಗ, ತಾಂತ್ರಿಕ ತೊಂದರೆ ಉಂಟಾಗಿ ವಿಮಾನ ಸ್ಫೋಟಗೊಂಡಿದೆ. ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಇದ್ದರು. ಅಪಘಾತದ ಸಮಯದಲ್ಲಿ ಇಬ್ಬರೂ ಎಜೆಕ್ಟ್ ಬಟನ್ ಪ್ರೆಸ್ ಮಾಡಿದ್ದಾರೆ. ಆದರೆ ಓರ್ವ ಪೈಲೆಟ್ ಅಪಘಾತವಾದ ವಿಮಾನದ ಮೇಲೆಯೇ ಬಿದ್ದಿದ್ದಾರೆ. ಮತ್ತೋರ್ವ ಪೈಲೆಟ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ವಿಮಾನ ಅಪಘಾತ ಬಗ್ಗೆ ಏರ್​ಫೋರ್ಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತಾಂತ್ರಿಕ ತನಿಖಾ ತಂಡ ಸೇರಿ ಇತರೆ ತಂಡಗಳಿಂದ ವಿಸ್ತೃತ ತನಿಖೆ ನಡೆಯಲಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ. ಈಗ, ಅದಕ್ಕೆ ನಿಖರ ಕಾರಣ ಹುಡುಕಲು ವಾಯುಸೇನೆ ಮುಂದಾಗಿದೆ.

ಕೇಂದ್ರ ಗೃಹ ಸಚಿವಾಲಯ ಈ ತನಿಖೆಯಲ್ಲಿ ಪಾಲ್ಗೊಂಡಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಯು ಪಡೆಯ ಅಧಿಕಾರಿಗಳು ತಾವೇ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರಿಂದ ಎನ್ಒಸಿ (ಆಕ್ಷೇಪಣೆ ಇಲ್ಲ ಎನ್ನುವ ಪತ್ರ) ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ