ರಾಹುಲ್​ ಗಾಂಧಿ ಓರ್ವ ಸರಳ ವ್ಯಕ್ತಿ: ದೇಶಕ್ಕೆ ಅವರಂತಹ ನಾಯಕನ ಅಗತ್ಯವಿದೆ: ಗೋವಾ ಬಿಜೆಪಿ ನಾಯಕ

ಪಣಜಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಓರ್ವ ಸರಳ ವ್ಯಕ್ತಿಯಾಗಿದ್ದು, ಗೋವಾ ಹಾಗೂ ಭಾರತಕ್ಕೆ ಅವರಂತಹ ನಾಯಕನ ಅಗತ್ಯವಿದೆ ಎಂದು ಗೋವಾ ಡೆಪ್ಯೂಟಿ ಸ್ಪೀಕರ್ ಹಾಗೂ ಬಿಜೆಪಿ ಮುಖಂಡ ಮೈಕೆಲ್​ ಲೋಬೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೋವಾ ಸಿಎಂ ಮನಹೋರ್ ಪರಿಕ್ಕರ್ ಅವರನ್ನು ರಾಹುಲ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬೆನ್ನಲ್ಲೇ ಮಾತನಾಡಿರುವ ಮೈಕೆಲ್ ಲೋಬೋ, ರಾಹುಲ್ ಗಾಂಧಿ ಅವರ ಸರಳತೆ ಹಾಗೂ ನಮ್ರತೆಯನ್ನು ದೇಶದ ಎಲ್ಲ ಜನತೆ ಮೆಚ್ಚಲೇಬೇಕು ಎಂದು ತಿಳಿಸಿದ್ದಾರೆ.

ಗೋವಾಗೆ ಖಾಸಗಿ ಭೇಟಿ ನೀಡಿದ್ದ ರಾಹುಲ್​ ಅವರು ಅನಾರೋಗ್ಯದಿಂದ ಬಳಲುತ್ತಿರುವ ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ರಾಷ್ಟ್ರ ನಾಯಕನಾಗಿ ಅವರು ಹೊಂದಿರುವ ಸರಳತೆ ಹಾಗೂ ನಮ್ರತೆಯನ್ನು ಎಲ್ಲ ಭಾರತೀಯರು ನೋಡಬೇಕಾಗಿದೆ. ಇಲ್ಲಿಗೆ ಬಂದಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು.

India needs leaders like Rahul Gandhi, says Goa BJP MLA

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ