ಕೆರೆಗಳ ಭರ್ತಿ ಮತ್ತು ದುರಸ್ತಿಗೆ 3000 ಕೋಟಿ ಒದಗಿಸುವಂತೆ ಪ್ರಸ್ತಾವನೆ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು,ಜ.28-ರಾಜ್ಯಾದ್ಯಂತ ಕೆರೆಗಳ ಭರ್ತಿ ಮತ್ತು ದುರಸ್ತಿಗೆ ಮೂರು ಸಾವಿರ ಕೋಟಿ ರೂ. ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಬಜೆಟ್ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3600 ಕೆರೆಗಳು ಬರುತ್ತವೆ. ಈ ಪೈಕಿ ಬಹುತೇಕ ಕೆರೆಗಳ ದುರಸ್ತಿ ಹಾಗೂ ಭರ್ತಿಗೆ ಮೂರು ಸಾವಿರ ಕೋಟಿ ರೂ.ಗಳನ್ನು ಕೇಳಿದ್ದೇವೆ ಎಂದರು.

ರಾಜ್ಯದ ವಿವಿಧ ಭಾಗಗಳಲ್ಲಿ ಕೆರೆಗಳ ದುರಸ್ತಿಗೆ ಈಗಾಗಲೇ ಐಟಿ ಕಂಪನಿಗಳು ಮುಂದೆ ಬಂದಿವೆ. ಬೆಂಗಳೂರಿಗೆ 700 ಕೋಟಿ ರೂ. ನೀಡಲು ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ಮೇಲುಕೋಟೆಯಲ್ಲಿ 100ಕ್ಕೂ ಹೆಚ್ಚು ಕಲ್ಯಾಣಿಗಳ ದುರಸ್ತಿಗೆ ಇನ್ಫೋಸಿಸ್ ಸಂಸ್ಥೆ ಕಾರ್ಯೋನ್ಮುಖವಾಗಿದೆ.ಮೈಸೂರಿನ ಹೆಬ್ಬಾಳ ಕೆರೆ ಅಭಿವೃದ್ಧಿಗೆ 40 ಕೋಟಿ ರೂ.ಖರ್ಚು ಮಾಡಿದೆ.15 ಕೋಟಿ ರೂ. ಹೆಚ್ಚುವರಿ ಖರ್ಚಿಗೆ ತಯಾರಿ ನಡೆಸಲಾಗಿದೆ. ಹಾಗೆಯೇ ವಿವಿಧ ಭಾಗಗಳಲ್ಲಿ ಐಟಿ ಕಂಪನಿಗಳು ತಮ್ಮ ತಮ್ಮ ವ್ಯಾಪ್ತಿಯ ಕೆರೆಗಳ ಸಂರಕ್ಷಣೆಗೆ ಮುಂದಾಗಿದೆ ಎಂದರು.

ಕೆಆರ್‍ಎಸ್ ಬಳಿ ಡಿಸ್ನಿ ಲ್ಯಾಂಡ್ ಬಳಿ ಉದ್ಯಾನವನ ನಿರ್ಮಿಸುವ ಸಂಬಂಧ ತಜ್ಞರ ಸಮಿತಿ ರಚಿಸಲಾಗಿದೆ.ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿಯವರನ್ನು ಅಧಿಕಾರದಿಂದ ದೂರವಿಡಲು ನಮಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ನಾಯಕರು ಇದೀಗ ಮುಖ್ಯಮಂತ್ರಿಗಳ ಕೆಲಸಕಾರ್ಯಗಳಿಗೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ