ಜ.17ರಿಂದ 20ರವರೆಗೆ ಅಂತಾರಾಷ್ಟ್ರೀಯ ಚರ್ಮರೋಗ ವೈದ್ಯರ ಸಮ್ಮೇಳನ

ಬೆಂಗಳೂರು,ಜ.14-ಅಂತಾರಾಷ್ಟ್ರೀಯ ಚರ್ಮರೋಗ ವೈದ್ಯರ ಸಮ್ಮೇಳನವನ್ನು ಇದೇ 17ರಿಂದ 20ರವರೆಗೆ ದೇವನಹಳ್ಳಿ ಸಮೀಪವಿರುವ ಕ್ಲಾಕ್ರ್ಸ್ ಎಕ್ಸೋಟಿಕಾ ಕನ್ವೇನಷನ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು ಡರ್ಮಾಟಾಲಜಿಕಲ್ ಸೊಸೈಟಿಯ ಅಧ್ಯಕ್ಷ ರಘುನಾಥ್ ರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಚರ್ಮರೋಗಗಳ ಪರಿಣಾಮಗಳ ಕುರಿತು ಚರ್ಮ ತಜ್ಞರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಿದೆ.ಚಿಕಿತ್ಸಾ ವಿಧಾನದ ಜೊತೆಗೆ ಹೇಗೆ ಚಿಕಿತ್ಸೆ ನೀಡುವುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡುವುದಾಗಿ ಹೇಳಿದರು.

ಇಂಡಿಯನ್ ಮಿಷನ್ ವಿತ್ ಗ್ಲೋಬಲ್ ವಿಷನ್ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸೊಸೈಟಿಯು ಸಮಾಜಕ್ಕೆ ಚರ್ಮರೋಗ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚರ್ಮರಥವನ್ನು ಸಹ ಆಯೋಜಿಸಿದೆ.

ಈ ರಥವು ಎರಡು ತಿಂಗಳ ಅವಧಿಯಲ್ಲಿ ದೇಶದ 18 ರಾಜ್ಯಗಳು ಸೇರಿದಂತೆ ಸುಮಾರು 12 ಸಾವಿರ ಕಿ.ಮೀ ಚಲಿಸಲಿದೆ. ಜನರಲ್ಲಿ ಸಾಮಾನ್ಯ ಚರ್ಮದ ಗುಣಗಳು, ಕುಷ್ಟ ರೋಗದ ಬಗೆಗಿನ ತಪ್ಪು ಗ್ರಹಿಕೆ, ತೊನ್ನು ಇವುಗಳ ಬಗ್ಗೆ ರೂಪಕಗಳನ್ನು ಆಯೋಜಿಸುವುದರ ಜೊತೆಗೆ ಚರ್ಮವನ್ನು ಕಾಯ್ದುಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸುವ ಶೈಕ್ಷಣಿಕ ವಿಡಿಯೋ ತುಣುಕುಗಳನ್ನು ಸಹ ತೋರಿಸಲಿದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ