ಕೌಶಲ್ ಕಿರಣ್ ಕುಮಾರ್ ದೇಶದ ಕಿರಿಯ ಸ್ಕೂಬಾ ಡೈವರ್

ಬೆಂಗಳೂರು,ಜ.12-ಇತ್ತೀಚೆಗೆ ಗೋವಾದ ಗ್ರ್ಯಾಂಡೇ ಐಲ್ಯಾಂಡ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಜಿಗಿತ, ನೀರೊಳಗಿನ ಕೌಶಲ್ಯಗಳನ್ನು ಪ್ರದರ್ಶಿಸಿ ಬೆಂಗಳೂರಿನ ಕೌಶಲ್ ಕಿರಣ್ ಕುಮಾರ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಬಾಲಕ ಕೌಶಲ್ ಅವರ ತರಬೇತುದಾರ ಅರವಿಂದ್ ವೇಣು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೌಶಲ್ ಅತ್ಯಂತ ಕಿರಿಯ ಭಾರತೀಯ ಸ್ಕೂಬಾ ಡ್ರೈವರ್ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಬಿಶಪ್‍ಕಾಟನ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೌಶಲ್ ತನ್ನ 8ನೇ ವಯಸ್ಸಿನಲ್ಲೇ ಈಜು ತರಬೇತಿಯನ್ನು ಪ್ರಾರಂಭಿಸಿ ಕರ್ನಾಟಕ ಎಂಜಿಜಿಯರ್ಸ್ ಅಕಾಡೆಮಿ, ಬಸವೇಶ್ವರನಗರ ಈಜು ತಂಡದಲ್ಲಿದ್ದಾನೆ ಎಂದು ವಿವರಿಸಿದರು.

2014ರಲ್ಲಿ ಮುಂಬೈ ಮೂಲದ ತಮನ್ನಾ ಬಾಲಚಂದರ್, 2010ರಲ್ಲಿ ಪಾರ್ಕ್ ಸಾಂಗ್ವಿ ಅವರು ಕಿರಿಯ ಸ್ಕೂಬಾ ಡೈವರ್ ಆಗಿದ್ದು, ಈ ದಾಖಲೆಯನ್ನು ಕೌಶಲ್ ಮುರಿದ್ದಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ