ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯ ಸಾವು

ಬೆಂಗಳೂರು, ಜ.9- ಅಪಘಾತದಲ್ಲಿ ಸುಮಾರು 45ರಿಂದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದು , ವಾರಸುದಾರರು ಕೂಡಲೇ ಕೆಎಸ್ ಲೇ ಔಟ್ ಸಂಚಾರಿ ಠಾಣೆ ಸಂಪರ್ಕಿಸಲು ಕೋರಲಾಗಿದೆ.
ಜ.5ರಂದು ಬೆಳಗಿನ ಜಾವ ಕನಕಪುರ ಮುಖ್ಯ ರಸ್ತೆ, ಜರಗನಹಳ್ಳಿ ಸಮೀಪದ ಮೆಟ್ರೋ ಪಿಲ್ಲರ್ ನಂಬರ್ 81ರ ಬಳಿ ಈ ವ್ಯಕ್ತಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾರೆ.

ಇವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆ ಗೆಂಪು ಬಣ್ಣ, ಬಲಗಾಲಿನ ಮಂಡಿ ಕೆಳ ಭಾಗಕ್ಕೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ವಾಕಿಂಗ್ ಸ್ಟಿಕ್ ಬಳಸುತ್ತಿದ್ದ ಈ ವ್ಯಕ್ತಿ ಬಿಳಿ ಶರ್ಟ್, ಕಂದು ಬಣ್ಣದ ಪ್ಯಾಂಟ್, ಉಲ್ಲನ್ ಸಿಮೆಂಟ್ ಬಣ್ಣದ ಸ್ವೆಟರ್ ಧರಿಸಿದ್ದಾರೆ.
ಈ ವ್ಯಕ್ತಿಯ ವಾರಸುದಾರರು ಕೂಡಲೇ ಕೆಎಸ್ ಲೇ ಔಟ್ ಸಂಚಾರ ಪೆÇಲೀಸ್ ಠಾಣೆ ದೂರವಾಣಿ 080- 22943109 ಅಥವಾ ಕಂಟ್ರೋಲ್ ರೂಂ 080-22943030 ಸಂಪರ್ಕಿಸಲು ಪೆÇಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ