ಅನಧಿಕೃತ ಕಮರ್ಷಿಯಲ್‌ ಚಟುವಟಿಕೆಯ ಅಂಗಡಿಗಳಿಗೆ ಬೀಗ ಹಾಕಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಹಾಗೂ ಅನಧಿಕೃತವಾಗಿ ಕಮರ್ಷಿಯಲ್‌ ಚಟುವಟಿಕೆ ನಡೆಸುವವರ ಲೈಸೆನ್ಸ್‌ ರದ್ದುಗೊಳಿಸಿ ಕೂಡಲೇ ಶಾಪ್‌ಗಳಿಗೆ ಬೀಗ ಹಾಕುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ ಆದೇಶಿಸಿದರು.

ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಕಮರ್ಷಿಯಲ್‌ ಚಟುವಟಿಕೆ ನಡೆಸುವವರ ಟ್ರೇಡ್‌ಲೈಸೆನ್ಸ್‌ ರದ್ದು, ಪಾದಚಾರಿ ಒತ್ತುವರಿ ತೆರವು ಸೇರಿ ಇತರೆ ವಿಷಯಗಳ ಕುರಿತು ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳೊಂದಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದರು.

ಟ್ರೇಡ್‌ಲೈಸೆನ್ಸ್‌ ಇಲ್ಲದ ಶಾಪ್‌ಗಳಿಗೆ ವಿದ್ಯುತ್ ಹಾಗೂ‌ ನೀರಿನ ಸಂಪರ್ಕ ನೀಡಿರುವ ಬಗ್ಗೆಯೂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಇನ್ನು‌ಮುಂದೆ ಲೈಸನ್ಸ್‌ ಇಲ್ಲದವರಿಗೆ ಯಾವುದೇ ಸಂಪರ್ಕ ಕೊಡುವಂತಿಲ್ಲ ಎಂದು ಹೇಳಿದರು.ಒಟ್ಟಿನಲ್ಲಿ ಇನ್ನು‌ ಕೆಲವೇ ದಿನಗಳಲ್ಲಿ ಅನಧಿಕೃತ ಶಾಪ್‌ಗಳು, ಬಾರ್‌ ರೆಸ್ಟೋರೆಂಟ್, ಪಬ್‌ಗಳು ತೆರೆದಿರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

* ಬಹುತೇಕ ರಸ್ತೆಗಳ ಪಾದಚಾರಿ‌ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಇಟ್ಟಿದ್ದಾರೆ. ಎಷ್ಟು ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ ಎಂಬ ಸೂಕ್ತ ಮಾಹಿತಿ ಕೂಡ ಇಲ್ಲ. ಹೀಗಾಗಿ ಕೂಡಲೇ ಇದರ ಸಮೀಕ್ಷೆ ನಡೆಸಿ, ಒತ್ತುವರಿಗೊಂಡ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವ ಕೆಲಸ ಪ್ರಾರಂಭಿಸಿ ಎಂದರು.

* ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಮಾಡುವವರನ್ನು ವಶಕ್ಕೆ ಪಡೆದು ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಸೇರಿಸಿ. ಸಮಾಜ ಕಲ್ಯಾಣ ಇಲಾಖೆ ಅವರು ಈ‌ ಕೆಲಸ ಮಾಡಲಿದ್ದಾರೆ. ಕೂಡಲೇ ಅವರ ಸಹಕಾರದಿಂದ ಭಿಕ್ಷಾಟನೆ ಮಾಡುವವರನ್ನು ವಶಕ್ಕೆ ಪಡೆಯುವ ಕೆಲಸವಾಗಲಿ‌ ಎಂದು ಸೂಚಿಸಿದರು.

* ಅನಧಿಕೃತ ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳ ತೆರವು ಕಾರ್ಯ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌ 8 ಸಾವಿರ ಕಿ.ಮೀ. ಮಾರ್ಗದಲ್ಲಿ ಅನಧಿಕೃತ ಕೇಬಲ್‌ ತೆರವುಗೊಳಿಸಲಾಗಿದೆ. ಈ ಕೆಲಸ ಮುಂದುವರೆಸಿ ಎಂದರು.

* ನಗರದಲ್ಲಿ‌ ಪ್ಲಾಸ್ಟಿಕ್‌ ಬ್ಯಾನ್ ಮಾಡಿದ್ದರೂ, ಕೆಲ ಕೈಗಾರಿಕೆಗಳು ಪ್ಲಾಸ್ಟಿಕ್ ತಯಾರಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿ್ಳುಗಳು ಎಚ್ಚರ ವಹಿಸಿ‌ ಎಂದು‌ ನಿರ್ದೇಶನ ನೀಡಿದರು.

* ಕೆರೆಗಳಿಗೆ ಕೊಳಚೆ ನೀರನ್ನು ಹರಿಬಿಡುವ ಕೈಗಾರಿಕೆ, ಕಾರ್ಖಾನೆಗಳಿಗೆ ಬೀಗ ಹಾಕಿಸಿ. ನೋಟಿಸ್ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾತ್ರೋರಾತ್ರಿ ಮಾಲಿನ್ಯ‌ನಿಯಂತ್ರಣ ಮಂಡಳಿಯವರು ಪೊಲೀಸರ ಸಹಕಾರದೊಂದಿಗೆ ಕೈಗಾರಿಕೆಗಳಿಗೆ ಬೀಗ ಹಾಕಿಸಿದರೆ ಕೊಳಚೆ ನೀರನ್ನು ಕೆರೆಗೆ ಬಿಡುವುದನ್ನು ನಿಯಂತ್ರಣಕ್ಕೆ ತರಬಹುದು‌ ಎಂದರು.

* ಧೂಮಪಾನ ನಿಷೇಧ ಕಾಯ್ದೆ ಅನ್ವಯ ನಗರದಲ್ಲಿ ಕಟ್ಟುನಿಟ್ಟಾಗಿ ಧೂಮಪಾನವನ್ನು ಸಾರ್ವಜನಿಕ ಸ್ಥಳದಲ್ಲಿ ನಿಷೇಧವಾಗಬೇಕು. ಈ ಸಂಬಂಧ ಜಾಗೃತಿ ಕಾರ್ಯಕ್ರಮ ಹೆಚ್ಚಿಸುವಂತೆ ಸೂಚನೆ

* ಕೆಳಮಹಡಿಯನ್ನು ವಾಹನ ನಿಲ್ದಾಣಕ್ಕೆ ಬಳಸದೇ ಆ ಜಾಗದಲ್ಲಿ ಇತರೆ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದನ್ನು ರದ್ದುಗೊಳಿಸಿ ಕ್ರಮ ಕೈಗೊಳ್ಳಿ ಎಂದರು.

Deputy Chief Minister,Dr G Parameshwara,Closure of commercial establishments in residential areas without licenses

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ