ಐಟಿ-ಬಿಟಿ ನೌಕರರಿಗೆ ತಟ್ಟದ ಬಂದ್ ಬಿಸಿ, ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ನೌಕರರು

ಬೆಂಗಳೂರು, ಜ.8- ಮುಷ್ಕರದ ಬಿಸಿ ಐಟಿ-ಬಿಟಿ ನೌಕರರಿಗೆ ತಟ್ಟಲಿಲ್ಲ. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಡಪಕ್ಷಗಳು ಎರಡು ದಿನಗಳ ಕಾಲ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿರುವ ನಡುವೆಯೇ ಐಟಿ-ಬಿಟಿ ನೌಕರರು ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾದರು.

ಮಾನ್ಯತಾ ಟೆಕ್‍ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್, ಇಂದಿರಾನಗರ, ಜಯನಗರ, ಜೆಪಿ ನಗರ, ಅರಕೆರೆ ಸೇರಿದಂತೆ ವಿವಿಧೆಡೆ ಇರುವ ಸಾಫ್ಟ್‍ವೇರ್ ಕಂಪೆನಿಗಳಲ್ಲಿ ಉದ್ಯೋಗಿಗಳು ಇಂದು ಎಂದಿನಂತೆ ಕೆಲಸ ನಿರ್ವಹಿಸಿದರು.

ಬಸ್ ಸಂಚಾರ ಇಲ್ಲದಿದ್ದರೂ ಕಂಪೆನಿಗಳಿಗೆ ಮೆಟ್ರೋ, ಟ್ಯಾಕ್ಸಿಗಳ ಮೂಲಕ ಬೆಳಗ್ಗೆಯೇ ತೆರಳಿದ ಉದ್ಯೋಗಿಗಳು ಕರ್ತವ್ಯದಲ್ಲಿ ತೊಡಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ