ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ, ಪಕ್ಕದ ಮೇಕೆ ಶೆಡ್ಡಿಗೂ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಮರಿಗಳು ಸೇರಿ 16 ಮೇಕೆಗಳ ಸಾವು

Fire Fierce Hot Flames Burning Orange Heat

ಬೆಂಗಳೂರು,ಜ.8- ಅಂಗಡಿಯೊಂದರಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಆವರಿಸಿದ್ದ ಹೊಗೆ ಪಕ್ಕದ ಮೇಕೆ ಶೆಡ್‍ಗೂ ಆವರಿಸಿದ್ದರಿಂದ ಉಸಿರುಗಟ್ಟಿ  ಮರಿಗಳು ಸೇರಿ 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಸಂತಪುರದಲ್ಲಿ ಜಯರಾಂ ಎಂಬುವರು ಅಂಗಡಿ ಇಟ್ಟುಕೊಂಡಿದ್ದು, ಇದರ ಪಕ್ಕದಲ್ಲೇ ಶೆಡ್ ಮಾಡಿ ಮೇಕೆ ಹಾಗೂ ಮೇಕೆ ಮರಿಗಳನ್ನು ಸಾಕಿ ಜೀವನ ನಡೆಸುತ್ತಿದ್ದರು.

ದುರಾದೃಷ್ಟವಶಾತ್ ಇಂದು ಬೆಳಗಿನ ಜಾವ 2.30ರಲ್ಲಿ ಇವರ ಅಂಗಡಿಯಲ್ಲಿ ಶಾರ್ಟ್‍ಸಕ್ರ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಪಕ್ಕದ ಶೆಡ್‍ಗೂ ಹೊಗೆ ಆವರಿಸಿಕೊಂಡಿದೆ.

ಪರಿಣಾಮವಾಗಿ ಶೆಡ್‍ನಲ್ಲಿದ್ದ ಮೇಕೆ ಮರಿಗಳೂ ಸೇರಿದಂತೆ 16 ಮೇಕೆಗಳು ಉಸಿರುಗಟ್ಟಿ ಸಾವನ್ನಪ್ಪಿವೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಈ ಅಂಗಡಿಯಲ್ಲಿ ಬೆಂಕಿಯಿಂದ ಹೊಗೆ ಆವರಿಸಿಕೊಂಡಿರುವುದನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ವಾಹನದೊಂದಿಗೆ ಆಗಮಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಮೇಕೆಗಳ ಪ್ರಾಣಪಕ್ಷಿ ಹಾರಿಹೋಗಿತ್ತು.

ಜೀವನೋಪಾಯಕ್ಕಾಗಿ ಮೇಕೆಗಳನ್ನು ಸಾಕಿದ್ದ ಜಯರಾಂ ಅವರು ಕಂಗಾಲಾಗಿದ್ದಾರೆ. ಸುದ್ದಿ ತಿಳಿದ ಸುಬ್ರಹ್ಮಣ್ಯಪುರ ಠಾಣೆ  ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಂಗಡಿಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ