ಕರ್ನಾಟಕದಲ್ಲಿ ಮಾರುಕಟ್ಟೆಗೆ ಬಂದ ರಿಯಲ್ ಮೀ ಆ್ಯಂಡ್ರಾಯ್ಡ್ ಮೊಬೈಲ್

ಬೆಂಗಳುರು,ಜ.7-ಮೊಬೈಲ್ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ವೈಜ್ಞಾನಿಕ ಯುಗದಲ್ಲಿ ಇಂದು ಭಾರತದ ದಕ್ಷಿಣ ಭಾಗದ ಹೆಬ್ಬಾಗಿಲು ಕರ್ನಾಟಕದಲ್ಲಿ ರಿಯಲ್ ಮೀ ಆ್ಯಂಡ್ರಾಯ್ಡ್ ಮೊಬೈಲ್ ಪರಿಚಯಿಸಲಾಗುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಧವ ಸೇಠ್ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಮೊಬೈಲ್ ಜೀವನದ ಅವಿಭಾಜ್ಯ ಅಂಗದಂತಾಗಿದೆ.ಎಲ್ಲ ವ್ಯವಹಾರಗಳು ಆನ್‍ಲೈನ್‍ನಲ್ಲಿ, ಮೊಬೈಲ್ ಮೂಲಕವೇ ನಡೆಯುತ್ತಿರುವುದರಿಂದ ಆ್ಯಂಡ್ರಾಯ್ಡ್ ಮೊಬೈಲ್ ಅತ್ಯವಶ್ಯವಾಗಿದೆ.ಈ ಹಿನ್ನೆಲೆಯಲ್ಲಿ ಕಂಪನಿ ಅಧ್ಯಕ್ಷರಾದ ಮೈಕೆಲ್ ಅವರು ಹೊಸದಾಗಿ ರಿಯಲ್‍ಮೀ ಎಂಬ ಆ್ಯಂಡ್ರಾಯ್ಡ್ ಮೊಬೈಲ್‍ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.

ಸದ್ಯಕ್ಕೆ ಆನ್‍ಲೈನ್ ಮಾರಾಟಕ್ಕೆ ಒತ್ತು ನೀಡಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಲಾಗುವುದು.ಜತೆಗೆ ಮೊಬೈಲ್ ಗಟ್ಟಿಯಾಗಿರುವುದು. ದೃಢತೆ ಮತ್ತು ಬಲಶಾಲಿವುಳ್ಳದ್ದಾಗಿದೆ. ಸ್ಕ್ರೀನ್ ಗ್ಲಾಸ್ ಯಾವುದೇ ಡ್ಯಾಮೇಜ್ ಇಲ್ಲ. ಅಂಥ ಸಮಸ್ಯೆಗಳು ಎದುರಾದರೆ ಸರ್ವೀಸ್ ಕೇಂದ್ರಗಳಲ್ಲಿ ಉತ್ತಮ ಸೇವೆ ಲಭ್ಯವಿರುತ್ತದೆ ಎಂದ ಅವರು, ಮೊಬೈಲ್ ದರ 5000 ರೂ.ಗಳಿಂದ 20,000 ರೂ.ಗಳವರೆಗಿರುತ್ತದೆ.ಬಡ ಮತ್ತು ಮಧ್ಯಮ ವರ್ಗದವರಿಗೆ ಸುಲಭ ದರದಲ್ಲಿ ಅತ್ಯುತ್ಕøಷ್ಟ ಫೆÇೀನ್ ದೊರೆಯಲೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಈಗಾಗಲೇ 1300 ಕ್ಕೂ ಹೆಚ್ಚು ರಿಲಯನ್ಸ್ ಡಿಜಿಟಲ್ ಮೈ ಜಿಯೋ ಮಳಿಗೆಗಳಲ್ಲಿ ರಿಯಲ್‍ಮಿ ಸ್ಮಾರ್ಟ್‍ಫೆÇೀನ್‍ಗಳನ್ನು ಮಾರಾಟ ಮಾಡಲಾಗಿದೆ.2018 ಮೇ ನಿಂದ ಇ- ಕಾಮರ್ಸ್ ಪ್ಲಾಟ್‍ಫಾರ್ಮ್‍ಗಳಲ್ಲಿ ಬ್ರಾಂಡ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ