
ನವದೆಹಲಿ: ರಾಫೆಲ್ ಒಪ್ಪಂದ ವಿವಾದ ಸಂಸತ್ ನಲ್ಲಿ ಪ್ರತಿದಿನ ಪ್ರತಿಧ್ವನಿಸಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಇಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ ರಕ್ಷಣಾ ಸಚಿವೆ, ರಾಷ್ಟ್ರೀಯ ಭದ್ರತೆ ಅತ್ಯಂತ ಮಹತ್ವದ್ದುಯತೆ ನೀಡಲಾಗುತ್ತಿದೆ. ಆ ಅಂಕಿ, ಅಂಶಗಳಿಂದ ನಾವು ಓಡಿ ಹೋಗುತ್ತಿಲ್ಲ ಎಂದರು.
ಸೆಪ್ಟೆಂಬರ್ 2019ರಲ್ಲಿ ಮೊದಲ ರಾಫೆಲ್ ಯುದ್ಧ ವಿಮಾನದ ಡೆಲಿವೆರಿ ಆಗಲಿದೆ. ನಂತರ 2022ರ ವೇಳೆಗೆ ಎಲ್ಲಾ 36 ವಿಮಾನಗಳು ಡೆಲಿವೆರಿ ಆಗಲಿದೆ. 14 ತಿಂಗಳಲ್ಲಿ ರಾಫೆಲ್ ಒಪ್ಪಂದದ ಮಾತುಕತೆ ಮುಗಿದಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ.
ನಾವು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಯುದ್ಧ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಸಕಾಲಕ್ಕೆ ರಕ್ಷಣಾ ಸಾಮಾಗ್ರಿ ಖರೀದಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ದೇಶದ ಭದ್ರತಾ ವಿಷಯದಲ್ಲಿ ರಾಜಕೀಯ ಸರಿಯಲ್ಲ ಎಂದರು.
ಯುಪಿಎ ಸರ್ಕಾರ ಕೇವಲ 18 ಯುದ್ಧ ವಿಮಾನ ಖರೀದಿಸಲು ಬಯಸಿತ್ತು ಮತ್ತು ಅದು ಸಹ ನೆನೆಗುದಿಗೆ ಬಿದ್ದಿತು ಎಂದು ರಕ್ಷಣಾ ಸಚಿವೆ ದೂರಿದ್ದಾರೆ. ರಕ್ಷಣಾ ಒಪ್ಪಂದಕ್ಕೂ ಮತ್ತು ರಕ್ಷಣೆಯಲ್ಲಿ ಒಪ್ಪಂದಕ್ಕೂ ಬಹಳ ವ್ಯತ್ಯಾಸವಿದೆ. ನಾವು ರಕ್ಷಣಾ ಡೀಲ್ ಮಾಡುತ್ತಿಲ್ಲ. ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವುದಕ್ಕಾಗಿ ರಕ್ಷಣೆಯಲ್ಲಿ ಡೀಲ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
Lok sabha,Nirmala seetaraman,Rafale Deal