ಕೇವಲ 139 ಸೆಕೆಂಡುಗಳಲ್ಲಿ ಎದುರಾಳಿಯನ್ನ ಹೊಡೆದುರಿಳಿಸಿದ ವಿಶ್ವ ಶ್ರೇಷ್ಠ ಬಾಕ್ಸರ್ ಮೇ ವೆದರ್

ಸೈತಮಾ (ಜಪಾನ್):ಅದು ಮೂರು ಸುತ್ತಿನ ಬಾಕ್ಸಿಂಗ್ ಕದನ. ಆದರೆ ವಿಶ್ವದ ಶ್ರೇಷ್ಠ ಬಾಕ್ಸರ್ ಫ್ಲಾಯ್ಡ್ ಮೆವೆದರ್ ಎದುರಾಳಿಯನ್ನ ಕೇವಲ 139 ಸೆಕೆಂಡುಗಳಲ್ಲಿ ಹೊಡೆದುರಳಿಸಿ ಸುಲಭ ಗೆಲುವು ವಿಶ್ವ ದಾಖಲೆ ಬರೆದಿದ್ದಾರೆ.

ಹೊಸ ರ್ವದ ಹಿನ್ನಲೆಯಲ್ಲಿ ಜಪಾನ್‍ನ ಸೈತಮಾ ಎಂಬಲ್ಲಿ ಇದೇ ದೇಶದ 20 ವರ್ಷದ ಕಿಕ್‍ಬಾಕ್ಸರ್ ತೆನ್ಶಿನ್ ನಾಸುಕಾವಾ ಮತ್ತು ಅಮೆರಿಕಾದ ಶ್ರೇಷ್ಠ ಬಾಕ್ಸರ್ ಮೇವೆದರ್ ನಡುವಿನ ಪ್ರದರ್ಶನದ ಪಂದ್ಯ ಆಗಿತ್ತು.

ಪಂದ್ಯ ಆರಂಭದಲ್ಲೆ ನಗುತ್ತಲ್ಲೆ ಮೇವೆದರ್ ತೆನ್ಶಿನ್ ನಾಸುಕಾವಾಗೆ ಪಂಚ್ ಕೊಟ್ಟು ಮೂರು ಬಾರಿ ನೆಲಕ್ಕೆ ಉರುಳಿಸಿದರು. ನೆಲಕ್ಕೆ ಬಿದ್ದ ತೆನ್ಶಿನ್ ಕೇವಲ ಎರಡೇ ನಿಮಿಷದಲ್ಲಿ ಸೋಲನ್ನ ಒಪ್ಪಿಕೊಂಡ್ರು.ಮೇ ವೆದರ್ ರಿಂಗ್‍ನಲ್ಲಿ ಡ್ಯಾನ್ಸ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿದರು.


ಪಂದ್ಯ ಮುಗಿದ ನಂತರ ಮೇ ವೆದರ್ ತೆನ್ಶಿನ್ ನಾಸುಕಾವಾ ಅವರ ಕೈಯನ್ನ ಮೇಲೆಕ್ಕೆ ಎತ್ತಿ ಕ್ರೀಡಾಸ್ಫೋರ್ತಿ ಮೆರದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ