ಲೋಕಸಭಾ ಚುನಾವಣೆ: ಎಐಸಿಸಿಗೆ 10 ಹೊಸ ರಾಷ್ಟ್ರೀಯ ವಕ್ತಾರರ ನೇಮಕ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಎಐಸಿಸಿಗೆ 10 ಹೊಸ ರಾಷ್ಟ್ರೀಯ ವಕ್ತಾರರ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ.

ಪಕ್ಷವು ಈಗಾಗಲೇ ಒಂಬತ್ತು ಪ್ರಮುಖ ನಾಯಕರನ್ನು ಹಿರಿಯ ವಕ್ತಾರರಾಗಿ ಮತ್ತು 26 ವಕ್ತಾರರನ್ನು ಒಳಗೊಂಡಿದ್ದು, ಈ ಸಾಲಿಗೆ ಮತ್ತೆ 10 ಜನ ಸೇರ್ಪಡೆಯಾಗಿದ್ದಾರೆ.

ರಾಜ್ಯಸಭಾ ಸಂಸದ ಸೈಯದ್‌ ನಸೀರ್‌ ಹುಸೇನ್‌, ಪವನ್‌ ಖೇರಾ, ಜೈವೀರ್‌ ಶೇರ್ಗಿಲ್‌, ರಾಗಿಣಿ ನಾಯಕ್‌, ಗೌರವ್‌ ವಲ್ಲಭ ಮತ್ತು ರಾಜೀವ್‌ ತ್ಯಾಗಿ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶದ ನಾಯಕ ಅಖಿಲೇಶ್‌ ಪ್ರತಾಪ್‌ ಸಿಂಗ್‌, ಸುನಿಲ್‌ ಅಹಿರೆ, ಶಾಸಕರಾದ ಹೀನಾ ಕವಾರೆ ಮತ್ತು ಶ್ರವಣ್‌ ಡಸೋಜು ಅವರು ಪಕ್ಷದ ನೂತನ ವಕ್ತಾರರಾಗಿ ನೇಮಕಗೊಂಡಿದ್ದಾರೆ.

ಇದೇ ವೇಳೆ ನೂತನ ಮಾಧ್ಯಮ ಪ್ಯಾನಲಿಸ್ಟ್‌ಗಳ ನೇಮಕಕ್ಕೂ ರಾಹುಲ್‌ ಅಸ್ತು ಎಂದಿದ್ದು, ಶಾಮಾ ಮೊಹಮ್ಮದ್‌, ಐಶ್ವರ್ಯ ಮಹಾದೇವ್‌, ಆದಿಲ್‌ ಬೋಪರಾಯ್‌, ಅಮನ್‌ ಪವಾರ್‌, ಸಂಜಯ್‌ ಚೊಕಾರ್‌, ಅನಿಲ್‌ ಧಾಂತೋರಿ ಮ್ತತು ಜರಿತಾ ಲೈತ್‌ಪಹ್ಲಾಂಗ್‌ ಅವರನ್ನು ನೇಮಕ ಮಾಡಲಾಗಿದೆ.

ಇದನ್ನು ಹೊರತುಪಡಿಸಿ ಸಂಜೀವ್‌ ಸಿಂಗ್‌ ಅವರನ್ನು ಮುಖ್ಯ ರಾಷ್ಟ್ರೀಯ ಮಾಧ್ಯಮಗಳ ಸಂಯೋಜಕರಾಗಿ ಮತ್ತು ಮನೋಜ್‌ ತ್ಯಾಗಿ ಹಾಗೂ ಮೊಹ್ದ್‌ ಖಾನ್‌ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ನೇಮಿಸಲಾಗಿದೆ.

Rahul Gandhi Appoints 10 New Congress Spokespersons

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ