ಹೊಸ ವರ್ಷದಂದು ಜನಿಸಿದ ಐದು ಹೆಣ್ಣು ಮಕ್ಕಳಿಗೆ ಬಿಬಿಎಂಪಿ ವತಿಯಿಂದ ತಲಾ ಐದು ಲಕ್ಷ ರೂ.

ಬೆಂಗಳೂರು, ಜ.1- ಹೊಸ ವರ್ಷದಂದು ಐವರು ಹೆಣ್ಣು ಮಕ್ಕಳು ಜನಿಸುವ ಮೂಲಕ ಹುಟ್ಟುತ್ತಲೇ ಪೋಷಕರಿಗೆ ಧನಲಕ್ಷ್ಮಿಯರಾಗಿದ್ದಾರೆ!

ಸರ್ಕಾರ ಇಂದು ಹುಟ್ಟುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅದರಂತೆ ಬಿಬಿಎಂಪಿಯ 24 ಆಸ್ಪತೆಗಳಲ್ಲಿ ಈವರೆಗೆ ಐವರು ಹೆಣ್ಣು ಮಕ್ಕಳು ಜನಿಸುವ ಮೂಲಕ ಪೋಷಕರ ಪಾಲಿಗೆ ಐಶ್ವರ್ಯ ಲಕ್ಷ್ಮಿಯರೆನಿಸಿದ್ದಾರೆ.

ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಕಮಲಾನಗರ ನಿವಾಸಿ ಆಶಾ ಮತ್ತು ಉದಯ ಕುಮಾರ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಚಾಲಕರಾಗಿರುವ ಉದಯ್ ಕುಮಾರ್, ಆಶಾ ದಂಪತಿಗೆ ಎರಡನೇ ಮಗುವಾಗಿ ಇಂದು ಹುಟ್ಟಿದ ಮಗು ಧನ ಲಕ್ಷ್ಮಿಯನ್ನೇ ಮನೆಗೆ ಕರೆತಂದಿದ್ದಾಳೆ.

ಸರ್ಕಾರದ ಬಹುಮಾನಕ್ಕೆ ಪಾತ್ರವಾದ ಮೊದಲ ಮಗು ಇದಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಈವರೆಗೆ ಬಿಬಿಎಂಪಿಯ ಇತರೆ ಆಸ್ಪತ್ರೆಗಳಲ್ಲಿ ಒಟ್ಟು ಐದು ಮಗು ಜನಿಸಿ, ಬಹುಮಾನಕ್ಕೆ ಪಾತ್ರವಾಗಿವೆ.

ಇಂದು ರಾತ್ರಿ 12 ಗಂಟೆಯವರೆಗೆ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹುಟ್ಟುವ ಹೆಣ್ಣು ಮಕ್ಕಳು ಈ ಬಹುಮಾನಕ್ಕೆ ಅರ್ಹರಾಗಿರುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ