ಬೆಂಗಳೂರಲ್ಲಿ ಗದ್ದಲ, ಗಲಾಟೆ ರಹಿತ ನ್ಯೂ ಇಯರ್… ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಸಕಲ ಸಿದ್ಧತೆ, ಬಿಗಿ ಭದ್ರತೆ ಕೈಗೊಂಡಿದ್ದ ನಗರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ‌ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರ ಸಂಭ್ರಮಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹೈ ಆಲರ್ಟ್ ಆಗಿ ಕೆಲಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಹೊಸ ವರ್ಷದ ಆಚರಣೆ ವೇಳೆ ಬಿಗ್ರೇಡ್ ರಸ್ತೆಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ರಾಷ್ಟ್ರ ಮಟ್ಟದಲ್ಲೇ ಸುದ್ದಿಯಾಗಿತ್ತು.

ಅಂತೆಯೇ ಈ ಬಾರಿ ಟ್ರಾಫಿಕ್ ಪೊಲೀಸರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಒಟ್ಟಾರೆ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆದಿದೆ.

ಇನ್ನು ನಗರದ ಎಲ್ಲಾ ಫ್ಲೈ ಓವರ್​ಗಳು ಬಂದ್ ಆಗಿದ್ದವು, ಮೆಟ್ರೋ ಮತ್ತು ಬಿಎಂಟಿಸಿ ಸಂಚಾರ 2 ಗಂಟೆಯವರೆಗೂ ಇತ್ತು. ಬಿಎಂಟಿಸಿ ಬಸ್ಸುಗಳು ನಗರದ ಎಲ್ಲಾ ಭಾಗಗಳಿಗೂ ಲಭ್ಯವಾಗಿದ್ದವು.

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿ ಸಂಚಾರಿ ಆಯುಕ್ತ ಹರಿಶೇಖರನ್ ಮಾತನಾಡಿ, ಬ್ರಿಗೇಡ್ ರೋಡ್​ಲ್ಲಿ ನಡೆಯುವಂತಹ ನ್ಯೂ ಇಯರ್ ಆಚರಣೆಗೆ ಸಕಲ ರೀತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ಜನರು ಯಾವುದೇ ಆತಂಕವಿಲ್ಲದೇ 2019ನೇ ವರ್ಷ ಸ್ವಾಗತಿಸಿದ್ದಾರೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಯಾವುದೇ ಟ್ರಾಫಿಕ್ ಸಮಸ್ಯೆ  ಆಗಿಲ್ಲ, ಇನ್ನು ಡ್ರಿಂಕ್ ಅಂಡ್ ಡ್ರೈವ್ ಕೇಸ್​ಗಳು ದಾಖಲಾಗಿಲ್ಲ ಎಂದರು .

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ