ಇಂದಿನಿಂದ ಈ 7 ನಿಯಮಗಳಲ್ಲಿ ಬದಲಾವಣೆ

ನವದೆಹಲಿ: ಪ್ರತಿ ವರ್ಷ ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಉತ್ಸುಕರಾಗಿರುತ್ತಾರೆ. ದಿನದಿಂದ ದಿನಕ್ಕೆ, ತಿಂಗಳು ಮತ್ತು ವರ್ಷವರೆಗೆ ಎಲ್ಲವೂ ಬದಲಾಗುತ್ತಿರುತ್ತದೆ. ಇದರಲ್ಲಿ ಹಲವು ನಿಯಮಗಳು ಇವೆ. ಹೊಸ ವರ್ಷದಲ್ಲಿ ಹಲವು ನಿಯಮಗಳು ಬದಲಾಗುತ್ತಿವೆ. ಅವು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಹೊಸ ವರ್ಷದಲ್ಲಿ ಯಾವ್ಯಾವ ನಿಯಮಗಳು ಬದಲಾಗುತ್ತಿವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

  1. 7 ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು 28 ರಿಂದ 18 ಪ್ರತಿಶತದಷ್ಟು ಇಳಿಸಲು ನಿರ್ಧರಿಸಲಾಗಿದೆ. ಉಳಿದ ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 18 ರಿಂದ ಶೇ. 12ಕ್ಕೆ ಇಳಿಸಲಾಗಿದೆ. ಜನವರಿ 1, 2019 ರಿಂದ ಈ ದರಗಳು ಜಾರಿಯಾಗಲಿವೆ.
  2. ಹೊಸ ವರ್ಷದಲ್ಲಿ, ಟಾಟಾ, ಮಾರುತಿ, ಫ್ರೋಕ್ಸಾವೇಗನ್ ಸೇರಿದಂತೆ ಎಲ್ಲಾ ಕಾರುಗಳ ಬೆಲೆ ಹೆಚ್ಚಾಗಲಿದೆ. ಹೊಸ ವರ್ಷದಲ್ಲಿ, ಎಲ್ಲಾ ವಾಹನಗಳ ಬೆಲೆ 40 ಸಾವಿರ ರೂಪಾಯಿಗಳಷ್ಟು ಹೆಚ್ಚಿಸಬಹುದು.
  3. ಜನವರಿ 1 ರಿಂದ ವಾಹನ ಅಪಘಾತ ಪ್ರಕರಣದಲ್ಲಿ, 1 ಲಕ್ಷದಿಂದ 15 ಲಕ್ಷ ರೂಪಾಯಿ ವಿಮೆ ಮೊತ್ತವನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಐಆರ್ಡಿಎಐ ಎಲ್ಲಾ ವಿಮಾ ಕಂಪನಿಗಳಿಗೆ ಅಧಿಸೂಚನೆ ಜಾರಿಗೊಳಿಸಿದೆ. ಅಧಿಸೂಚನೆ ಪ್ರಕಾರ, ಅಪಘಾತಗಳ ಸಂದರ್ಭದಲ್ಲಿ, ಮೋಟಾರ್ ವಿಮಾವನ್ನು 15 ಲಕ್ಷ ರೂ.ವರೆಗೆ ಹೆಚ್ಚಿಸಬಹುದು. ಇದರ ಪ್ರೀಮಿಯಂ ರೂ. 750 ಕ್ಕೆ ನಿಗದಿ ಮಾಡಲಾಗಿದೆ.
  4. ಆರ್‌ಬಿಐ ಅಧಿಸೂಚನೆಯನ್ವಯ ಜನವರಿ 1, 2019 ರಿಂದ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳು ಕಾರ್ಯನಿರ್ವಹಿಸುವುದಿಲ್ಲ. ಮ್ಯಾಗ್ನೆಟಿಕ್ ಸ್ಟ್ರಿಪ್ ಕಾರ್ಡ್ ಗಳ ಜಾಗಕ್ಕೆ ಇವಿಎಂ ಚಿಪ್‌ ಹೊಂದಿರುವ ಕಾರ್ಡ್ ಗಳು ಚಾಲ್ತಿಗೆ ಬರಲಿವೆ.
  5. ನೀವು ಇನ್ನೂ 2017-18 ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, 5,000 ರ ಬದಲಿಗೆ, ಅದು 10,000 ರೂ. ಪೆನಾಲ್ಟಿ ಕಟ್ಟಬೇಕಾಗುತ್ತದೆ.
  6. ನೀವು ಇನ್ನೂ ಹಳೆಯ ಚೆಕ್ಬುಕ್ ಬಳಸುತ್ತೀರಾ? ಹಾಗಿದ್ದರೆ ಮೊದಲು ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ CTS ಚೆಕ್ ಪುಸ್ತಕವನ್ನು ಪಡೆದುಕೊಳ್ಳಿ.
  7. ಇಂದಿನಿಂದ ಸ್ಟೇಟ್ ಬ್ಯಾಂಕಿನ ಮನೆಯ ಮೇಲಿನ ಸಾಲದ ನಿಯಮಗಳನ್ನು ಕೂಡಾ ಬದಲಾಯಿಸಲಾಗಿದೆ. ಡಿಸೆಂಬರ್ 31 ರ ತನಕ ಮನೆ ಸಾಲಕ್ಕೆ ಅರ್ಜಿ ಸಲ್ಲಿಸುವುದು, ಯಾವುದೇ ಪ್ರಕ್ರಿಯೆ ಶುಲ್ಕವಿರಲಿಲ್ಲ. ಜನವರಿ 1 ರಿಂದ ಪ್ರಕ್ರಿಯೆ ಶುಲ್ಕಗಳು ಅಗತ್ಯವಾಗಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ