ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ನಷ್ಟ್ಕಕೆ 436 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಮೆಲ್ಬೋರ್ನ್ನಲ್ಲ ನಡೆದ ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಭಾರತ ಚೇತೃಶ್ವರ ಪೂಜಾರ ಆಕರ್ಷಕ ಶತಕ ಸಿಡಿಸಿ ಟೆಸ್ಟ್ ನಲ್ಲಿ 17ನೇ ಶತಕ ಪೂರೈಸಿದ ಸಾಧನೆ ಮಾಡಿದ್ರು. ಆದರೆ ಶತಕದತ್ತ ಮುನ್ನಗುತ್ತಿದ್ದ ನಾಯಕ ವಿರಾಟ್ ಕೊಹ್ಲಿ 82 ರನ್ಗಳಿಸಿದ್ದಾಗ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ನಂತರ ಬಂದ ರೋಹಿತ್ ಶರ್ಮಾ (63) ಅರ್ಧ ಶತಕ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದ್ರು. ಅಜಿಂಕ್ಯ ರಹಾನೆ (34), ರಿಷಭ್ ಪಂತ್ (39), ರವೀಂದ್ರ ಜಡೇಜಾ 4ರನ್ ಗಳಿಸಿದರು.
ದಿನದಾಟದ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳಲ್ಲಿಲ್ಲ. ಆರಂಭಿಕರಾದ ಮಾರ್ಕಸ್ ಹ್ಯಾರಿಸ್ ಅಜೇಯ 5, ಆ್ಯರಾನ್ ಫಿಂಚ್ ಅಜೇಯ 3 ರನ್ ಗಳಿಸಿ ಮೂರನೇ ದಿನಕ್ಕೆ ಕ್ರಿಸ್ ಕಾಯ್ದಕೊಂಡರು.