ಬಾಹುಬಲಿ, 2.0 ಚಿತ್ರದ ನಂತರ ಜನ ಮೆಚ್ಚಿದ ಸಿನಿಮಾ ಕೆಜಿಎಫ್: ರಾಮ್ ಗೋಪಾಲ್ ವರ್ಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಚಿತ್ರದ ಕುರಿತಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ವಿವಾದಾತ್ಮಕ ಹೇಳಿಕೆಗಳ ಮೂಲಕ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದು ಸ್ಥಳೀಯ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಹಿಂದಿಯಲ್ಲಿ ಬಾಹುಬಲಿ, 2.0 ಚಿತ್ರಗಳ ನಂತರ ಕೆಜಿಎಫ್ ಚಿತ್ರ ಭರ್ಜರಿ ಜಯ ಸಾಧಿಸುತ್ತಿದೆ. ಒಂದು ಒಳ್ಳೆಯ ಚಿತ್ರವನ್ನು ಎಲ್ಲಿ ಬೇಕಾದರೂ ತಯಾರಿಸಬಹುದು. ಅದು ಎಲ್ಲ ಕಡೆ ಓಡುತ್ತದೆ. ಕೆಜಿಎಫ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಕಳೆದ ವಾರ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರ 5 ದಿನಗಳಲ್ಲೇ 100 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕನ್ನಡದ ಮಟ್ಟಿಗೆ ನೂರು ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಕೆಜಿಎಫ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ