ಡಿ.21ರಂದು ಮಲ್ಲೇಶ್ವರ ಸೇವಾಸಧನದಲ್ಲಿ ನಾಟ್ಯನಿನಾದ ನೃತ್ಯ ಹಬ್ಬ

ಬೆಂಗಳೂರು, ಡಿ.16-ಯುವ ನೃತ್ಯ ದಂಪತಿ ಪ್ರತಿಭೆಗಳಾದ ವಿದ್ವಾನ್ ಚೇತನ್ ಗಂಗಟ್ಕರ್ ಮತ್ತು ವಿದುಷಿ ಚಂದ್ರಪ್ರಭ ಚೇತನ್ ರವರ ನೇತೃತ್ವದಲ್ಲಿ ನಡೆಯುವ ನಾಟ್ಯ ನಿನಾದ ನೃತ್ಯಾಲಯದ ವಾರ್ಷಿಕ ನಾಟ್ಯನಿನಾದ ನೃತ್ಯ ಹಬ್ಬ-2018 ಇದೇ 21 ರಂದು ಶುಕ್ರವಾರ ಸಂಜೆ 6 ಗಂಟೆಗೆ ನಗರದ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಲಾಗಿದೆ.

ನೃತ್ಯ ಪಟುಗಳಿಂದ ನೃತ್ಯ ಪಟುಗಳಿಗಾಗಿ ಒಂದು ಉಪಕ್ರಮ ಎಂಬ ಅಡಿ ಬರಹದೊಡನೆ 2006ರಲ್ಲಿ ಆರಂಭವಾದ ಈ ನೃತ್ಯೋತ್ಸವವು ಸತತ 12ನೇ ವರ್ಷದಲ್ಲಿ ಮುನ್ನಡೆಯುತ್ತಿದೆ.

ವಿದ್ವಾನ್ ಚೇತನ್ ಗಂಗಟ್ಕರ್ ಮತ್ತು ವಿದುಷಿ ಚಂದ್ರಪ್ರಭ ಚೇತನ್ ರವರ ಶಿಷ್ಯೆ ನಮಿತ.ಕೆ ರವರಿಂದ ಭರತನಾಟ್ಯ ನಂತರ ವಿದ್ವಾನ್ ಚೇತನ್ ಗಂಗಟ್ಕರ್ ಮತ್ತು ವಿದುಷಿ ಚಂದ್ರಪ್ರಭ ಚೇತನ್ ದಂಪತಿಗಳಿಂದ ಕೂಚುಪುಡಿ ನೃತ್ಯ ಹಾಗೂ ಗುರು ನರ್ಮದಾ ಮತ್ತು ಡಾ ಸೌಚಿದರ್ಯ ಶ್ರೀವತ್ಸರವರ ಶಿಷ್ಯೆ ಅಂಜನಾ ಸುಧೀಂದ್ರರವರ ಭರತನಾಟ್ಯ ಪ್ರಸ್ತುತಿಯು ನೃತ್ಯಾಸಕ್ತರ ಮನಸೂರೆಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ