ವಿಶ್ವ ಕಪ್ ನಿಂದ ಆತಿಥೇಯ ಭಾರತ ಹಾಕಿ ಔಟ್

ಭುವನೇಶ್ವರ : ಹಾಕಿ ವಿಶ್ವಕಪ್ನಲ್ಲಿ ನಲ್ಲಿ ಆತಿಥೇಯ ಭಾರತ ಟೂರ್ನಿಯಿಂದ ಹೊರ ಬಿದ್ದಿದೆ. ಭುವನಶ್ವರದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನ್ಪ್ರೀತ್ ಪಡೆ 1-2 ಗೋಲಿನ ಅಂತರದಿಂದ ಸೋಲು ಕಂಡಿತು.

ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಯಿತು. ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಪಂದ್ಯದ ಕೊನೆಯ ಕ್ಷಣದವರೆಗೂ ಭಾರೀ ಹೋರಾಟವನ್ನ ನೀಡಿದವು. ಪಂದ್ಯದ ಆರಂಭದ 12ನೇ ನಿಮಿಷದಲ್ಲಿ ಭಾರತದ ಪರ ಆಕಾಶ್ದೀಪ್ ರಿವರ್ಸ್ ಪೆನಾಲ್ಟಿ ಕಾರ್ನರ್ ಸಹಾಯದಿಂದ ಮೊದಲ ಗೋಲು ಬಾರಿಸಿ ಭರವಸೆ ಮೂಡಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ನೆದರ್ ಲ್ಯಾಂಡ್ ತಂಡದ ಥೀರಿ ಬ್ರಿಂಕ್ಮನ್ ಫೀಲ್ಡ್ ಗೋಲು ಬಾರಿಸಿ 1-1 ಸಮ ಸಾಧಿಸಿದ್ರು.

ನಂತರ ಎರಡನೇ ಮತ್ತು ಮೂರನೇ ಕ್ವಾರ್ಟರ್ನಲ್ಲಿ ಉಭಯ ತಂಡಗಳು ಭಾರೀ ಪೈಪೋಟಿ ನೀಡಿದ ಪರಿಣಾಮ ಯಾವುದೇ ಗೋಲುಗಳು ದಾಖಲಾಗಲ್ಲಿಲ್ಲ. ಆದರೆ ನಾಲ್ಕನೆ ಕ್ವಾರ್ಟರ್ನ 50ನೇ ನಿಮಿಷದಲ್ಲಿ ನೆದರ್ಲ್ಯಾಂಡ್ ತಂಡದ ಅನುಭವಿ ಆಟಗಾರ ವಾನ್ ಡೆರ್ ವೃಡೆನ್ ಗೋಲು ಬಾರಿಸಿ ಭಾರತ ಗೆಲುವನ್ನ ಕಿತ್ತುಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ