ವಜ್ರದ ವ್ಯಾಪಾರಿ ಹತ್ಯೆ ಪ್ರಕರಣ: ಖ್ಯಾತ ಮಾಡೆಲ್​ ಹಾಗೂ ನಟಿ ದೆಬೊಲಿನಾ ಬಟ್ಟಾಚಾರ್ಯಾ ವಿಚಾರಣೆ; ಓರ್ವ ರಾಜಕಾರಣಿ ಬಂಧನ

ಮುಂಬೈ: ವಜ್ರದ ವ್ಯಾಪಾರಿ ರಾಜೇಶ್ವರ್​ ಕೆ.ಉದಾನಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾಡೆಲ್​ ಹಾಗೂ ನಟಿ ದೆಬೊಲಿನಾ ಬಟ್ಟಾಚಾರ್ಯಾ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಮುಂಬೈ ಪೊಲೀಸರು, ಓರ್ವ ರಾಜಕಾರಣಿ ಹಾಗೂ ಅಮಾನತ್ತಾದ ಓರ್ವ ಪೊಲೀಸ್​ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ನಟಿ ದೆವೆಲೀನಾ ಭಟ್ಟಾಚರ್ಜಿ ಅವರನ್ನು ಹಲವು ಗಂಟೆಗಳ ಕಾಲ ಪೊಲೀಸರು ತೀವ್ರ ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಇನ್ನು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಕೊಲೆಯಾದ ವಜ್ರದ ವ್ಯಾಪಾರಿಯ ಗೆಳೆಯ ಹಾಗೂ ಬಿಜಿನೆಸ್ ಪಾರ್ಟನರ್ ಆಗಿರುವ ರಾಜಕಾರಣಿ ಸಚಿನ್ ಪವಾರ್ ಮತ್ತು ಪೊಲೀಸ್​​ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮುಂಬೈನಿಂದ ಕಾಣೆಯಾಗಿದ್ದ ವಜ್ರದ ವ್ಯಾಪಾರಿ ರಾಜೇಶ್ವರ್​ ಉದಾನಿ ಅವರು ಮೂರು ದಿನಗಳ ನಂತರ ರಾಯ್​ಘಡದ ಅರಣ್ಯದ ಅಂಚಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಸಂಚನ ಸೃಷ್ಟಿಸಿದ್ದು, ಪ್ರಕರಣದಲ್ಲಿ ಕೆಲ ರಾಜಕಾರಣಿಗಳು ಮತ್ತು ಕಿರುತೆರೆ ನಟಿಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಉದಾನಿ (57) ಕಾಣೆಯಾಗಿರುವ ಬಗ್ಗೆ ಅವರ ಮನೆಯವರು ನ.28 ರಂದು ದೂರು ನೀಡಿದ್ದರು. ಬಳಿಕ ಪೊಲೀಸರು ಅವರ ಫೋನ್ ಟ್ರ್ಯಾಪ್​ ಮಾಡಿದಾಗ ಅದು ನವಿ ಮುಂಬೈನಲ್ಲಿ ಇರುವುದು ಗೊತ್ತಾಗಿತ್ತು. ಆದ್ರೆ ಬಳಿಕ ಸಿಗ್ನಲ್ ಸಿಕ್ಕಿರಲಿಲ್ಲ. ಬಳಿಕ ಡಿ.4 ರಂದು ಕುಟುಂಬಸ್ಥರು ಅಪಹರಣ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಶವ ಪತ್ತೆಯಾಗಿತ್ತು. ಅಪಹರಣಕಾರರು ಕೊಲೆ ಮಾಡಿ ಶವವನ್ನು ಅರಣ್ಯಪ್ರದೇಶದಲ್ಲಿ ತಂದು ಎಸೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.

TV actress Debolina Bhattacharya detained,Mumbai diamond trader Rajeshwar Udani’s murder, politician arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ