ಡಿ.9ರಂದು ಪ್ರೆಸ್ ಕ್ಲಬ್ ಆವರಣದಲ್ಲಿ ಯೋಗಾಸನ ಸ್ಪರ್ಧೆ

ಬೆಂಗಳೂರು, ಡಿ.7- ಎಸ್‍ಜಿಎಸ್ ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜ್ ಅಂಡ್ ರೀಸರ್ಚ್ ಸೆಂಟರ್ ವತಿಯಿಂದ ಯೋಗಾಸನ ಸ್ಪರ್ಧೆ ಹಾಗೂ ಅಂತರ್ಜಾಲ ಯೋಗ ತರಬೇತಿ ಉದ್ಘಾಟನಾ ಸಮಾರಂಭ ಇದೇ 9 ರಂದು ನಗರದ ಪ್ರೆಸ್‍ಕ್ಲಬ್ ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೆಂಟರ್ ಸಂಸ್ಥಾಪಕ ಡಾ.ಎಂ.ನಿರಂಜನ, ಬೇಲಿಮಠ ಸಂಸ್ಥಾನದ ಶಿವರುದ್ರ ಮಹಾಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಮೇಯರ್ ಗಂಗಾಬಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅಧ್ಯಕ್ಷತೆ ವಹಿಸಲಿದ್ದು, ಯೋಗ ಕೋಚಿಂಗ್ ಅಪ್ ಬಿಡುಗಡೆಗೊಳಿಸಲಿದ್ದಾರೆ. ವಿಧಾನಪರಿಷತ್ತಿನ ಸದಸ್ಯ ಎಂ.ಸಿ.ವೇಣುಗೋಪಾಲ್, ನಟ ಟೆನ್ನಿಸ್ ಕೃಷ್ಣ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ