ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 26 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಮೈಸೂರು, ಡಿ.7- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಪೊಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 26 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ಕೊಮ್ಮೆಗೌಡನ ಕೊಪ್ಪಲುವಾಸಿ ಸೋಮೇಶ (35) ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ.

ಬಾಲಕಿಯೊಬ್ಬಳು ಗ್ರಾಮವೊಂದರ ತನ್ನ ಸೋದರತ್ತೆ ಮನೆಯಲ್ಲಿ ವಾಸವಿದ್ದು, ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು.2017ರ ನವೆಂಬರ್ 19ರಂದು ಸ್ತ್ರೀ ಶಕ್ತಿ ಸಂಘದ ಸಭೆಗಾಗಿ ಸೋದರತ್ತೆ ಮನೆಯಿಂದ ಹೊರಗೆ ಹೋದಾಗ ಈ ವೇಳೆ ಬಾಲಕಿ ಮೇಲೆ ಸೋಮೇಶ್ ಅತ್ಯಾಚಾರವೆಸಗಿದ್ದ.

ಸೋದರತ್ತೆ ಸಭೆಯಿಂದ ವಾಪಸ್ ಬಂದಾಗ ಬಾಲಕಿ ವಿಷಯ ತಿಳಿಸಿದ್ದಳು.ನಂತರ ಪೊಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ವಿಚಾರಣೆ ನಡೆಸಿದ ಪೊಕ್ಸೋ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್.ಜಯಶ್ರೀ ಅವರು ಆರೋಪಿಗೆ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ 26 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ವಿಶೇಷ ಅಭಿಯೋಜಕ ಬಿ.ಸಿ.ಶಿವರುದ್ರ ಸ್ವಾಮೀಜಿ ಅವರು ಸರ್ಕಾರದ ಪರ ವಾದ ಮಂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ