ಬಸಾಪುರದ ಹಳ್ಳವೊಂದರಲ್ಲಿ ಮೃತದೇಹ ಪತ್ತೆ

ದಾವಣಗೆರೆ,ಡಿ.7- ಬಸಾಪುರ ಗ್ರಾಮದ ಹಳ್ಳವೊಂದರಲ್ಲಿ ಖಾಸಗಿ ಬಸ್ ಏಜೆಂಟ್ ಒಬ್ಬರ ಮೃತದೇಹ ಇಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಚಂದ್ರಪ್ಪ(33) ಎಂಬುವರ ಶವ ಪತ್ತೆಯಾಗಿದ್ದು, ಮೃತನ ತಲೆ ಹಾಗೂ ಮುಖದಲ್ಲಿ ಬಲವಾದ ಗಾಯಗಳಾಗಿವೆ.

ಕಳೆದ ಮೂರು ದಿನಗಳ ಹಿಂದೆ ಚಂದ್ರಪ್ಪ ಆವರಗೆರೆಯಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿದ್ದರು. ಇಂದು ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂಭಾಗ ಹಳ್ಳದಲ್ಲಿ ಇವರ ದೇಹ ಪತ್ತೆಯಾಗಿದೆ.

ಚಿಗಟೇರಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ದೇಹವನ್ನಿಲಾಗಿದ್ದು, ಈತನ ಅಕ್ಕ ತಮ್ಮನನ್ನು ಕೊಲೆ ಮಾಡಲಾಗಿದೆ ಎಂದು ನಗರದ ಆರ್‍ಎಂಸಿಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಚ್.ಕೆ.ರಾಮಚಂದ್ರಪ್ಪ ನಗರದ ಭಾಗೀರಥಿ ಎಂಬಾಕೆಯೊಂದಿಗೆ ಚಂದ್ರಪ್ಪ ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಭಾಗೀರಥಿಗೆ ಯುವಕನೊಬ್ಬನ ಪರಿಚಯವಾಗಿತ್ತು.ಆತನೇ ನನ್ನ ತಮ್ಮನನ್ನು ಕೊಲೆ ಮಾಡಿರಬಹುದು ಎಂದು ಮೃತನ ಅಕ್ಕ ದೂರಿನಲ್ಲಿ ತಿಳಿಸಿದ್ದಾರೆ.
ಆರ್‍ಎಂಸಿಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ