ಖ್ಯಾತ ನಿರ್ದೇಶಕ ಎ.ಅರ್.ಬಾಬು ನಿಧನ

ಬೆಂಗಳೂರು, ಡಿ.4- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಆರ್.ಬಾಬು ಅವರು ಇಂದು ಬೆಳಗ್ಗೆ ಶೇಷಾದ್ರಿಪುರಂನ ಅಪೆÇೀಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಎ.ಆರ್.ಬಾಬು ಅವರು ಇಬ್ಬರು ಪುತ್ರ ಮತ್ತು ಪತ್ನಿಯನ್ನು ಅಗಲಿದ್ದು ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಾಶಿನಾಥ್ ನಟನೆಯ ಚೋರ್ ಗುರು ಚೆಂಡಾಲ್ ಶಿಷ್ಯ ಚಿತ್ರವನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದ ಎ.ಆರ್.ಬಾಬು ಅವರು ಕಾಮಿಡಿ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಸಿದ್ಧಹಸ್ತರು.

ಜಗ್ಗೇಶ್ ಅಭಿನಯದ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಆಗೋದೆಲ್ಲಾ ಒಳೆಯದಕ್ಕೆ, ಶಶಿಕುಮಾರ್ ನಟನೆಯ ರೀ ಸ್ವಲ್ಪ ಬರ್ತೀರಾ, ಕೂಲಿರಾಜ ಚಿತ್ರಗಳನ್ನು ನಿರ್ದೇಶಿಸಿದ್ದ ಎ.ಆರ್.ಬಾಬುಗೆ ಹಲೋ ಯಮ ಚಿತ್ರ ಹೆಸರು ತಂದುಕೊಟ್ಟಿತ್ತು. ಖಳನಾಯಕ , ಜೀಬೂಂಬಾ, ಮರುಜನ್ಮ, ಚಮ್ಕಾಸಿ ಚಿಂದಿ ಉಡಾಯ್ಸಿ, ಸಂಪೆÇ್ರೀ ರಾಣಿ ಸೇರಿದಂತೆ 26 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ನಿರ್ದೇಶಕನಾಗಿ ಮಾತ್ರವಲ್ಲದೆ ಗೋವಿಂದ ಗೋಪಾಲ, ಹಲೋಯಮ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕವೂ ಗಮನ ಸೆಳೆದಿದ್ದರು.

ಅನಾರೋಗ್ಯದ ನಡುವೆಯು ಸಮೋಸ, ಇಲ್ಲದವರು ಇರುವೆ ಬಿಟ್ಟಕೊಂಡ್ರು ಚಿತ್ರದಲ್ಲಿ ನಟಿಸಿದ್ದು ಈ ಚಿತ್ರಗಳು ಬಿಡುಗಡೆಯಾಗಬೇಕಿದೆ.
ಎ.ಆರ್.ಬಾಬು ಅವರ ನಿಧನಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಿರ್ಮಾಪಕರ, ನಿರ್ದೇಶಕರ ಸಂಘದವರು ಸಂತಾಪ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ