ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಯನ್ನು ಆತನ ನಿವಾಸದಿಂದಲೇ ಪೊಲೀಸರು ಬಂಧಿಸಿದ್ದಾರೆ.
ಇಹ್ತೆಶಾಂ ಬಿಲಾಲ ಬಂಧಿತ ವಿದ್ಯಾರ್ಥಿ. ಈತ ನೋಯ್ಡಾ ಮೂಲದ ವಿವಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದ. ಬಳಿಕ ನಿಷೇಧಿತ ಐಸಿಸ್ ಸಂಘಟನೆ ಸೇರಿದ್ದ ಬಿಲಾಲ್ ಹೆತ್ತವರ ಕರೆಗೆ ಓಗೊಟ್ಟು ಮನೆಗೆ ಮರಳಿದ್ದಾರೆ.
ಬಿಲಾಲ್ ಶ್ರೀನಗರದ ಖನ್ಯಾರ್ ಗ್ರಾಮದ ನಿವಾಸಿಯಾಗಿದ್ದು, ನೋಯ್ಡಾದ ಶಾರದಾ ವಿವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಆದರೆ ಕಳೆದ ಅಕ್ಟೋಬರ್ ಬಳಿಕ ನಾಪತ್ತೆಯಾಗಿದ್ದ. ಕಳೆದ ತಿಂಗಳು ಬಿಲಾಲ್ ಕಪ್ಪು ಬಣ್ಣದ ಧಿರಿಸು ತೊಟ್ಟು, ಶಸ್ತ್ರ ಮತ್ತು ಐಸಿಸ್ ಧ್ವಜ ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಮಧ್ಯೆ, ಕಾಣೆಯಾಗಿರುವ ತಮ್ಮ ಪುತ್ರನನ್ನು ಹುಡುಕಿಕೊಡುವಂತೆ ಬಿಲಾಲ್ನ ಪೊಷಕರು ಪೊಲೀಸರಲ್ಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ರವಿವಾರ ಮಧ್ಯಾಹ್ನ ಬಿಲಾಲ್ ಮನೆಗೆ ಮರಳಿದ್ದಾನೆ. ತಕ್ಷಣ ಆತನನ್ನು ಪೊಲೀಸರ ತಂಡ ಬಂಧಿಸಿ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಬಿಲಾಲ್ ನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
jammu-kashmir,student, joins isis,arrest