ಕಾಶ್ಮೀರದ ಶಾರದಾ ಪೀಠವನ್ನೂ ಕರ್ತಾರ್ ಪುರ ಕಾರಿಡಾರ್ ಮಾದರಿಯಲ್ಲಿ ಪುನರುಜ್ಜೀವನಗೊಳಿಸಿ: ಪ್ರಧಾನಿ ಮೋದಿಗೆ ಮೆಹಬೂಬಾ ಮುಫ್ತಿ ಪತ್ರ

ಶ್ರೀನಗರ: ಕರ್ತಾರ್ ಪುರ ಕಾರಿಡಾರ್ ಮಾದರಿಯಲ್ಲಿಯೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರಾದಾ ಪೀಠವನ್ನೂ ಪುನರುಜ್ಜೀವನಗೊಳಿಸಿ, ಯಾತ್ರಾರ್ಥಿಗಳಿಗೆ ಅನುಕೂಲಮಾಡಿಕೊಡಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಮೆಹಬೂಬಾ ಮುಫ್ತಿ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಶಾರದಾಪೀಠ ಯಾತ್ರೆಗೆ ಭಕ್ತಾದಿಗಳಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ತಾರ್ ಪುರ ಕಾರಿಡಾರ್ ಮಾದರಿಯಲ್ಲೇ ಶಾರದಾ ಪೀಠವನ್ನು ಪುನರುಜ್ಜೀವನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ತಾರ್ ಪುರ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ, ನಮ್ಮ ಸರ್ಕಾರ ಕಾಶ್ಮೀರ ಶಾರದಾ ಪೀಠವೂ ಸೇರಿದಂತೆ ಪಾಕಿಸ್ತಾನ ಪ್ರದೇಶದಲ್ಲಿರುವ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಸಂದರ್ಶಿಸುವುದಕ್ಕೆ ಭಾರತೀಯ ಯಾತ್ರಾರ್ಥಿಗಳಿಗೆ ಅನುವು ಮಾಡಿಕೊಡುವುದರ ಪ್ರಸ್ತಾವನೆಯನ್ನು ಪರಿಗಣಿಸಲು ಸಿದ್ಧವಿದೆ ಎಂದಿದ್ದರು. ಈ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಎಲ್ಒಸಿ ಬಳಿ ಇರುವ ಶಾರದಾಪೀಠ ದೇವಾಲಯ ಭಗ್ನ ಸ್ಥಿತಿಯಲ್ಲಿದ್ದು, ಪುನರುಜ್ಜೀವನಗೊಳಿಸಬೇಕೆಂಬ ಆಗ್ರಹ ಹೆಚ್ಚುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮಿಗಳವರು ಪ್ರಧಾನಿ ನರೇಂದ್ರ ಮೋದಿ ಮೋದಿ ಅವರಿಗೆ ಪತ್ರ ಬರೆದಿದು, ಯಾತ್ರಾರ್ಥಿಗಳಿಗೆ ಶಾರದಾಪೀಠ ದೇವಾಲ ಸಂದರ್ಶಿಸಲು ಅವಕಾಶ ನೀಡಬೇಕೆಂದಿದ್ದರು.

Open route to Sharada Peeth in PoK, Mehbooba Muft,i writes to PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ