ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ತೆರವುಗೊಳಿಸಿದ ಜಿಲ್ಲಾಢಳಿತ

ಬೆಂಗಳೂರು, ಡಿ.1-ಉತ್ತರ ವಿಭಾಗದಲ್ಲಿ  ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 50 ಕೋಟಿ ರೂ. ಮೌಲ್ಯದ ಜಮೀನನ್ನು ಇಂದು ನಗರ ಜಿಲ್ಲಾಡಳಿತ ತೆರವುಗೊಳಿಸಿದೆ.

ಯಲಹಂಕ ಸಮೀಪ ಪುಟ್ಟೇನಹಳ್ಳಿ ಸರ್ವೆ ನಂ.41 ರಲ್ಲಿ ರಸ್ತೆ ಹೊಂದಿಕೊಂಡಂತಿದ್ದ ಒಂದೂವರೆ ಸರ್ಕಾರಿ ಗೋಮಾಳದಲ್ಲಿ ಕೆಲವರು ತಾತ್ಕಾಲಿಕ ಕಟ್ಟಡಗಳನ್ನು ಮತ್ತು ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದರು. ಹಲವು ಬಾರಿ ನೋಟೀಸ್ ನೀಡಿದ್ದರೂ ಅದನ್ನು ಒತ್ತುವರಿದಾರರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‍ಶಂಕರ್, ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ 32 ಶೆಡ್‍ಗಳನ್ನು ಸುಮಾರು 8 ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿರುವುದು ಖಚಿತವಾದ ಹಿನ್ನೆಲೆಯಲ್ಲಿ 4 ಜೆಸಿಬಿ ಬಳಸಿ ಮಧ್ಯಾಹ್ನದ ವೇಳೆಗೆ ತೆರವುಗೊಳಿಸಲಾಯಿತು.ಇದರ ಅಂದಾಜು ಮೌಲ್ಯ ಸುಮಾರು 50 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ಸ್ಥಳೀಯ ಒತ್ತುವರಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಪೆÇಲೀಸರ ಬಿಗಿ ಭದ್ರತೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯಾಚರಣೆ ನಡೆಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ