2019ರಲ್ಲಿ ನಾಲ್ವರು ಐಪಿಎಸ್, 13 ಮಂದಿ ಐಎಎಸ್ ಮತ್ತು 7 ಮಂದಿ ಐಎಫ್ಎಸ್ ಅಧಿಕಾರಿಗಳ ನಿವೃತ್ತಿ

ಬೆಂಗಳೂರು, ನ.30- ಹಿರಿಯ ಐಪಿಎಸ್ ಅಧಿಕಾರಿ ಎಚ್.ಸಿ.ಕಿಶೋರ್‍ಚಂದ್ರ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳು, 13 ಮಂದಿ ಐಎಎಸ್ ಅಧಿಕಾರಿಗಳು ಹಾಗೂ ಏಳು ಮಂದಿ ಐಎಫ್‍ಎಸ್ ಅಧಿಕಾರಿಗಳು 2019ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಎಚ್.ಸಿ.ಕಿಶೋರ್‍ಚಂದ್ರ, ಡಾ.ಡಿ.ಸಿ.ರಾಜಪ್ಪ, ಡಾ.ಟಿ.ಡಿ.ಪವರ್ ಅವರ ಮೇ ಅಂತ್ಯದಲ್ಲಿ ನಿವೃತ್ತಿ ಹೊಂದಿದರೆ, ಎಚ್.ಎಸ್.ರೇವಣ್ಣ ಜುಲೈ 31ರಂದು ಸೇವೆಯಿಂದ ನಿವೃತ್ತ ಹೊಂದಲಿದ್ದಾರೆ.

ಅದೇ ರೀತಿ ಐಎಎಸ್ ಅಧಿಕಾರಿಗಳಾದ ಬಿ.ರಾಮು ಅವರು ಮುಂದಿನ ಜನವರಿ 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಐಎಎಸ್ ಅಧಿಕಾರಿಗಳಾದ ಹೇಮಾಜಿ ನಾಯಕ್, ಎಂ.ವಿ.ಸಾವಿತ್ರಿ, ಎಂ.ಕೆ.ಅಯ್ಯಪ್ಪ ಅವರು 2019ರ ಮಾರ್ಚ್ 31ರಂದು ನಿವೃತ್ತಿಯಾಗುವರು.
ಚಕ್ರವರ್ತಿ ಮೋಹನ್ ಅವರು ಮೇ ಅಂತ್ಯದಲ್ಲಿ ನಿವೃತ್ತಿಯಾದರೆ, ವಿ.ಶಂಕರ್, ಡಾ.ಬಿ.ಬಸವರಾಜ್, ಎಸ್.ಪಾಲಯ್ಯ ಅವರು ಜೂನ್ 30ರಂದು ನಿವೃತ್ತಿಯಾಗಲಿದ್ದಾರೆ.

ಪಿ.ಎ.ಮೇಘಣ್ಣನವರ್, ಎಂ.ಮಂಜುನಾಥ ನಾಯಕ್ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತಿ ಹೊಂದುವರು.ಸುಭಾಷ್ ಚಂದ್ರ ಹಾಗೂ ಡಾ.ಕೆ.ಪಿ.ಕೃಷ್ಣನ್ ಅವರು 2019ರ ಡಿ.31ರಂದು ನಿವೃತ್ತಿಯಾಗುವರು.

ಐಎಫ್‍ಎಸ್ ಅಧಿಕಾರಿಗಳಾದ ಎನ್.ಎಲ್.ಶಾಂತಕುಮಾರ್ ಜನವರಿ 31ರಂದು ನಿವೃತ್ತಿಯಾದರೆ, ಸಿ.ಜಯರಾಮ್ ಫೆಬ್ರವರಿ 28ರಂದು ನಿವೃತ್ತಿಯಾಗಲಿದ್ದಾರೆ. ಅಶೋಕ್ ಬಿ.ಭಾಸ್ಕರ್‍ಕೋಡ್ ಮಾರ್ಚ್ 31ರಂದು, ಅಂಬಾಡಿ ಮಹದೇವ್ ಮೇ 31, ಶ್ರೀಕಾಂತ್ ವಿ.ಹೊಸೂರ್ ಜೂನ್ 30ರಂದು ನಿವೃತ್ತಿಯಾಗುವರು. ಜಿ.ಎಸ್.ಕಾರಿಯಪ್ಪ ಜು.31ರಂದು ಕೆ.ಬಿ.ಮಂಜುನಾಥ್ ಆಗಸ್ಟ್ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ 2019ರಲ್ಲಿ ನಿವೃತ್ತಿಯಾಗಲಿರುವ ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್‍ಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ