ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅವರಿಂದ ಜನರಿಗೆ ಏಡ್ಸ್ ಬಗ್ಗೆ ಅರಿವು

ಬೆಂಗಳೂರು,ನ.29- ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬೆಂಗಳೂರು ಬ್ರಾಂಚ್ ವತಿಯಿಂದ ವಿಶ್ವ ಏಡ್ಸ್ ದಿನದ ಅಂಗವಾಗಿ ಜನರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಡಿ.1ರಂದು ಜಾಥಾ ನಡೆಸಲಿದೆ ಎಂದು ಅಸೋಸಿಯೇಷನ್‍ನ ಅಧ್ಯಕ್ಷ ಡಾ.ಎನ್.ಧನಪಾಲ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂದು ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಿಂದ ಐಎಂಎ ಹೌಸ್, ಚಾಮರಾಜಪೇಟೆ ಮುಖ್ಯರಸ್ತೆ, ರಾಮಕೃಷ್ಣ ಆಶ್ರಮ, ನ್ಯಾಷನಲ್ ಕಾಲೇಜ್, ಕೆ.ಆರ್.ರಸ್ತೆ ಮುಖಾಂತರ ಜಾಥಾ ನಡೆಸಿ ಮತ್ತೆ ಕಾಲೇಜಿನ ಆವರಣಕ್ಕೆ ಸಮಾವೇಶಗೊಳ್ಳಲಿದೆ.

ಈ ಜಾಥಾವನ್ನು ನಟಿ ಪ್ರಿಯಾಂಕ ಉಪೇಂದ್ರ ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್, ಡಾ.ಸಚಿದ್ದಾನಂದ ಭಾಗವಹಿಸಲಿದ್ದಾರೆ.
ಈ ಜಾಥಾದಲ್ಲಿ ಎಚ್‍ಐವಿ ಸೋಂಕಿತರ ಬಗ್ಗೆ ಮಾಹಿತಿ ನೀಡಲಿದ್ದು, ಕುಟುಂಬದವರು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಿಳಿಸಲಾಗುವುದು. ಸೋಂಕಿನಿಂದ ಯಾರೂ ಕೂಡ ಸಾಯುವುದಿಲ್ಲ. ಅವರು ಸಾಮಾನ್ಯ ಜನರಂತೆ ಬಾಳಬಹುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ