ಅಮರ್ ಚಿತ್ರಕ್ಕಾಗಿ ಅಂಬರೀಷ್ ಸಿನಿಮಾದ ಪ್ರಸಿದ್ದ ಟೈಟಲ್ ಸಾಂಗ್ ಪುನರ್ ಚಿತ್ರೀಕರಣ!

ಬೆಂಗಳೂರು: ಅಭಿಷೇಕ್ ಅಭಿನಯದ ಅಮರ್ ಚಿತ್ಕಕ್ಕಾಗಿ ಅಂಬರೀಷ್ ನಟನೆಯ ಚಿತ್ರವೊಂದರ ಟೈಟಲ್ ಟ್ರ್ಯಾಕ್ ಅನ್ನು ಮತ್ತೆ ಪುನರ್ ಚಿತ್ರಿಸಲಾಗುತ್ತಿದೆ.
ನಾಗಶೇಖರ್ ನಿರ್ದೇಶನದ ಅಮರ್ ಚಿತ್ರಕ್ಕಾಗಿ 1987 ರಲ್ಲಿ  ತೆರೆಕಂಡ ಅಂಬರೀಷ್ ನಟನೆಯ ಒಲವಿನ ಉಡುಗೊರೆ ಸಿನಿಮಾದ ಟೈಟಲ್ ಸಾಂಗ್ ಒಲವಿನ ಉಡುಗೊರೆ ಕೊಡಲೇನು ಹಾಡನ್ನು ಪುನರ್ ಚಿತ್ರೀಕರಿಸಲಾಗುತ್ತಿದೆ.
ಮೂಲ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರು ನಿರ್ದೇಶಿಸಿದ್ದರು, ಎಂ,ರಂಗರಾವ್ ಸಂಗೀತ ಸಂಯೋಜಿಸಿದ್ದು, ಆರ್.ಎನ್ ಜಯಗೋಪಾಲ್ ಸಾಹಿತ್ಯ ಬರೆದಿದ್ದರು, ಈ ಹಾಡು ಅಂಬರೀಷ್ ಅವರ ಮೆಚ್ಚಿನ ಗೀತೆ ಕೂಡ ಇದಾಗಿತ್ತು.
ಒಲವಿನ ಉಡುಗೊರೆ ಹಾಡು ಹಾಡಿನಲ್ಲಿ ಅಭಿಷೇಕ್ ಮತ್ತು ತಾನ್ಯ ಹೊಪೆ ನಟಿಸಿದ್ದಾರೆ,  ಈ ಹಾಡನ್ನು ಸಂಪೂರ್ಣವಾಗಿ ಮೈಸೂರಿನಲ್ಲಿ ಚಿತ್ರೀಕರಿಸಲಾಗುತ್ತದೆ.ಆ ಹಾಡು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಮರ್ ಸಿನಿಮಾದಲ್ಲಿ ಅಭಿಷೇಕ್ ಬೈಕ್ ರೈಡರ್ ಆಗಿ ನಟಿಸಿದ್ದಾರೆ, ಈ ಸಿನಿಮಾಗಾಗಿ ಪ್ರಪಂಚದಾದ್ಯಂತ ಸಂಚರಿಸಲಿರುವ ಸಿನಿಮಾ ತಂಡ ಹೊಸ ದಾಖಲೆ ನಿರ್ಮಿಸಲು ಕಾಯುತ್ತಿದೆ, ಇತ್ತೀಚೆಗೆ ಚಿತ್ರತಂಡ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ಮುಗಿಸಿದೆ. ಶೇ.80 ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನುಳಿದಿರುವ ಕೆಲವು ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ