ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: 6ನೇ ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತದ ಮೇರಿ ಕೋಮ್

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್‌ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಮೇರಿ ಕೋಮ್‌ ಜಯ ಸಾಧಿಸಿದ್ದಾರೆ.

ಈ ಮೂಲಕ ಮೇರಿ ಕೋಮ್ ಆರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 48 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಮೇರಿ, ಉಕ್ರೇನ್‌ನ ಹನಾ ಒಕೋಟಾ ಅವರ ವಿರುದ್ಧ 5:0 ಅಂಕಗಳಿಂದ ಜಯಗಳಿಸಿ, ಚಿನ್ನಕ್ಕೆ ಮುತ್ತಿಕ್ಕಿದರು.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಮೇರಿ ದಕ್ಷಿಣ ಕೊರಿಯಾದ ಕಿಮ್ ಹಾಂಗ್ ಮಿ ಅವರನ್ನು ಮಣಿಸಿದ್ದರು. ಹನಾ ಒಕೋಟಾ ಸೆಮಿಫೈನಲ್‌ನಲ್ಲಿ ಜಪಾನ್‌ನ ಮಡೋಕಾ ವಾಡ ಅವರಿಗೆ ಸೋಲುಣಿಸಿದ್ದರು.

2002ರಲ್ಲಿ ಮೊದಲ ಬಾರಿ ಮೇರಿ ಕೋಮ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆಗ ಅವರು 45 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 2005, 2006 ಮತ್ತು 2008ರಲ್ಲಿ 46 ಕೆ.ಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. 2010ರಲ್ಲಿ 48 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಮೊದಲಿಗರಾಗಿದ್ದರು.

Mary Kom creates history with 6th gold at Women’s World Boxing Championships

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ