ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅಗತ್ಯ

ಬೆಂಗಳೂರು, ನ.24- ಬೆಂಗಳೂರು ನಗರದ ಕಸದ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರು ಸಹಕರಿಸಿದರೆ ಕಸದ ಸಮಸ್ಯೆ ಬಗೆಹರಿಸುವುದು ದೊಡ್ಡ ವಿಷಯವೇನಲ್ಲ ಎಂದು ಇಂದಿಲ್ಲಿ ಹೇಳಿದರು.

ಉಪಮುಖ್ಯಮಂತ್ರಿ ನೇತೃತ್ವದಲ್ಲಿಂದು ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಿದೇಶದಲ್ಲಿ ಸ್ವಚ್ಛತೆ ಬಗ್ಗೆ ನಮ್ಮ ನಾಗರಿಕರು ಮಾತನಾಡುತ್ತಾರೆ.ಆದರೆ, ಅಲ್ಲಿ ಒಂದು ಕಾಗದ ಬಿಸಾಕಿದರೆ, ಉಗುಳಿದರೆ ದಂಡ ಹಾಕುತ್ತಾರೆ.ಅಂತಹ ಪರಿಸ್ಥಿತಿ ನಮಗೆ ಬೇಕ ಎಂದು ಕೇಳಿದರು.
ವಾರ್ಡ್ ಕಮಿಟಿ ಸಭೆ ಇನ್ನು ಮುಂದೆ ತಪ್ಪದೆ ನಡೆಯುತ್ತದೆ. ವಾರ್ಡ್ ಮಟ್ಟದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ನಿಮಗೆ ನಾವು ಸುಲಭವಾಗಿ ಸಿಗುತ್ತೇವೆ. ನಿಮ್ಮ ಯಾವುದೇ ಸಮಸ್ಯೆಗಳನ್ನು ನಮ್ಮ ಬಳಿ ಹೇಳಿ.ಅದನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು. ಜನಪ್ರತಿನಿಧಿಗಳು, ಅಧಿಕಾರಿಗಳು ಕೈಗೆ ಸಿಗುವುದಿಲ್ಲ ಎಂಬ ಮಾತು ಸಾರ್ವಜನಿಕರಲ್ಲಿದೆ. ಜನರ ಸಮಸ್ಯೆಗಳನ್ನು ಆಲಿಸಲು ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಿರಿಯ ಪೆÇಲೀಸ್ ಅಧಿಕಾರಿ ಹರಿಶೇಖರನ್ ಮಾತನಾಡಿ, ಗಾಡಿಗಳಲ್ಲಿ ಕಸವನ್ನು ತಂದುಹಾಕಿದರೆ ಅಂತಹವರ ಮೇಲೆ ಕ್ರಿಮಿನಲ್ ಕೇಸು ಹಾಕಲಾಗುವುದು.ಪೆÇಲೀಸ್ ಸ್ಟೇಷನ್‍ನಲ್ಲಿ ಸೀಜ್ ಮಾಡಿರುವ ಗಾಡಿಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಬಸ್‍ವೇಗಳು ಬೆಂಗಳೂರಿನಲ್ಲಿ ಕಡಿಮೆ ಇವೆ. ಅವುಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬಸ್‍ವೇ ಬಳಿ ಪಾರ್ಕಿಂಗ್ ಮಾಡದೆ ಇರುವವರ ಬಳಿ 44 ಲಕ್ಷ ದಂಡ ಸಂಗ್ರಹಿಸಿದ್ದೇವೆ. ಒಂದು ತಿಂಗಳಲ್ಲಿ 1 ಸಾವಿರ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಟ್ರಾಫಿಕ್ ಸಮಸ್ಯೆ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಟ್ರಾಫಿಕ್ ಇಲಾಖೆಯಿಂದ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನಮಗೆ ದೂರು ನೀಡಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ