ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಿರುವ ಬಿಬಿಎಂಪಿ

ಬೆಂಗಳೂರು, ನ.20-ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿರುವವರ ವಿರುದ್ಧ ಛಾಟಿ ಬೀಸಲು ಬಿಬಿಎಂಪಿ ಮುಂದಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗೆ ಎಲ್ಲಾ ಆಸ್ತಿ ತೆರಿಗೆದಾರರು ಬಾಕಿ ಪಾವತಿಸಲು ಪಾಲಿಕೆ ಗಡುವು ನೀಡಿದೆ.

ನಗರದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್. ಆಸ್ತಿ ತೆರಿಗೆ ಬಾಕಿ ಪಾವತಿದಾರರು ಮಾರ್ಚ್ ತಿಂಗಳ ಒಳಗೆ ಪಾವತಿಸುವಂತೆ ಸೂಚಿಸಲಾಗಿದೆ.ಬಾಕಿ ಇರುವ ಆಸ್ತಿ ತೆರಿಗೆಯನ್ನು ಮಾರ್ಚ್ ಒಳಗೆ ಸಂಗ್ರಹಿಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದೇವೆ ಎಂದು ತಿಳಿಸಿದರು.

ಈ ಆರ್ಥಿಕ ವರ್ಷದಲ್ಲಿ 3 ಸಾವಿರ ಕೋಟಿ ರೂಪಾಯಿ ಆಸ್ತಿ ತೆರಿಗೆಯಲ್ಲಿ 2031 ಕೋಟಿ ರೂ.ಸಂಗ್ರಹವಾಗಿದೆ. ಇನ್ನು ಬಾಕಿ ಇರುವ ತೆರಿಗೆಯನ್ನು ಮಾರ್ಚ್ ಒಳಗೆ ಸಂಗ್ರಹಿಸÀಬೇಕು ಎಂಬ ಗುರಿ ನೀಡಲಾಗಿದೆ. ಹಿಂದಿನ ಬಾಕಿ 2 ಸಾವಿರ ಕೋಟಿ ರೂ.ಇದ್ದು, ಅದರಲ್ಲಿ 350 ಕೋಟಿ ಸಂಗ್ರಹವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪುನರುತ್ತರಿಸಿದರು.

ರೈತರ ಹಿತ ಕಾಪಾಡುವುದು ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅವರಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ದೇಶದಲ್ಲಿ ಜಾರಿಗೆ ತಂದಿದ್ದೇ ಕಾಂಗ್ರೆಸ್ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ