2030ರ ವೇಳೆಗೆ ವೈರಲ್ ಹೆಪಟೈಟಿಸ್ ಕಾಯಿಲೆಗಳ ಸಂಪೂರ್ಣ ನಿರ್ಮೂಲನೆ

ಬೆಂಗಳೂರು, ನ.19- ದೇಶದಲ್ಲಿ 2030ರ ವೇಳೆಗೆ ವೈರಲ್ ಹೆಪಟೈಟಿಸ್ ಕಾಯಿಲೆಗಳ ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಸರ್ಕಾರ ಸಂಕಲ್ಪತೊಟ್ಟಿದೆ.

ನ್ಯಾಷನಲ್ ವೈರಲ್ ಹೆಪಟೈಟಿಸ್ ಕಂಟ್ರೋಲ್ ಪೆÇ್ರೀ ಎಂಬ ಕಾರ್ಯಕ್ರಮದ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈರಲ್ ಸೋಂಕುಗಳನ್ನು ನಿರ್ಮೂಲನೆ ಮಾಡಲು ಮುಂದಾಗಿದೆ. ಪ್ರಸಕ್ತ ವರ್ಷದ ಜು.28ರಂದು ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಮುಂತಾದ ವೈರಲ್ ಸೋಂಕುಗಳನ್ನು ನಿಯಂತ್ರಿಸಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ.

ಉಚಿತ ಆರೋಗ್ಯ ಪರೀಕ್ಷೆ, ಎಲ್ಲಾ ಸೋಂಕು ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುವುದು, ಜತೆಗೆ ಮಕ್ಕಳಿಗೆ ಉಚಿತ ಹೆಪಟೈಟಿಸ್ ಬಿ ಲಸಿಕೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಆಯುಷ್ ಇಲಾಖೆ ಕೂಡಾ ನಾನ್ ಕಮ್ಯುನಿಕೇಬಲ್ ಡಿಸೀಸ್ (ಎನ್‍ಸಿಡಿ)ಗಳ ನಿಯಂತ್ರಣಕ್ಕೆ ಕೈ ಜೋಡಿಸಿದ್ದು, ಇದಕ್ಕಾಗಿ ಎನ್‍ಸಿಡಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ