ನನ್ನ ನಿವೃತ್ತಿಗೆ ಧೋನಿ ಕಾರಣವಲ್ಲ : ವಿವಿಎಸ್ ಲಕ್ಷ್ಮಣ್

ಟೀಂ ಇಂಡಿಯಾದ ಮಾಜಿ ಟೆಸ್ಟ್ ಸ್ಪೆಶಲಿಸ್ಟ್ ವಿವಿಎಸ್ ಲಕ್ಷ್ಮಣ್ ತಮ್ಮ ವಿವಾದಿತ ಟೆಸ್ಟ್ ನಿವೃತ್ತಿ ಕುರಿತು ಇದೀಗ ಬಹಿರಂಗ ಪಡಿಸಿದ್ದಾರೆ. ತಮ್ಮ ನಿವೃತ್ತಿಗೆ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
2012ರಲ್ಲಿ ವಿವಿಎಸ್ ಲಕ್ಷ್ಮಣ್ ಟೆಸ್ಟ್‍ಗೆ ದಿಢೀರಾಗಿ ನಿವೃತ್ತಿ ಘೋಷಿಸಿದ್ದರು. ಈ ಕಾರಣಕ್ಕಾಗಿ ಲಕ್ಷ್ಮಣ್ ಅವರ ಟೆಸ್ಟ್ ನಿವೃತ್ತಿ ಇಂದಿಗೂ ರಹಸ್ಯವಾಗಿ ಉಳಿದಿತ್ತು. 2012ರಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಲಕ್ಷ್ಮಣ್ ಅವರನ್ನ ಕೈಬಿಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಲಕ್ಷ್ಮಣ್ ತವರು ಹೈದರಾಬಾದ್‍ನಲ್ಲಿ ಟೆಸ್ಟ್ ಆಡೋದಕ್ಕೆ ಸಜ್ಜಾಗಿದ್ರು. ನಂತರದ ಬೆಳವಣಿಗೆಯಲ್ಲಿ ಲಕ್ಷ್ಮಣ್ ದೀಢೀರಾಗಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಅಚ್ಚರಿ ನೀಡಿದ್ರು.
ಲಕ್ಷ್ಮಣ್ ನಿವೃತ್ತಿ ಘೋಷಿಸುವ ವೇಳೆ ಅಂದಿನ ನಾಯಕ ಧೋನಿಯನ್ನ ಸಂಪರ್ಕಿಸಿರಲ್ಲಿಲ್ಲ. ನಂತರ ಲಕ್ಷ್ಮಣ್ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಧೋನಿ ಗೆ ಆಹ್ವಾನ ನೀಡಿರಲ್ಲಿಲ್ಲ. ಇದನ್ನ ಧೋನಿ ಕೂಡ ಹೇಳಿಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ವಿವಿಎಸ್ ಲಕ್ಷ್ಮಣ್ ಅಂದು ನಾನು ಮಾಧ್ಯಮಗಳಿಗೆ ನಿವೃತ್ತಿ ವಿಚಾರ ಹೇಳಿದ ನಂತರ ಮಾಧ್ಯಮಗಳು ಪ್ರಶ್ನೆಗಳ ಸುರಿಮಳೆಗೈದವು. ಧೋನಿ ಬಳಿ ಈ ಬಗ್ಗೆ ಮಾತನಾಡಿದ್ದೀರಾ ? ಇದರ ಬಗ್ಗೆ ಅವರೇನು ಹೇಳುತ್ತಾರೆ ? ಆಗ ನಾನು ಧೋನಿಯನ್ನ ತಲುಪುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹಾಸ್ಯ ಚಟಾಕಿ ಸಿಡಿಸಿದೆ. ಇದು ನನ್ನ ಕ್ರಿಕೆಟ್ ಬದುಕಿನಲ್ಲಿ ಮೊದಲ ಬಾರಿಗೆ ದೊಡ್ಡ ವಿವಾದವಾಗಿ ಮಾಧ್ಯಮಗಳಿಗೆ ಆಹಾರವಾಗಿಬಿಟ್ಟೆ ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ. ಮಧ್ಯಮಗಳು ನನ್ನ ನಿವೃತ್ತಿಯನ್ನ ವಿವಿಎಸ್ ಗಾಯಗೊಂಡು ನಿವೃತ್ತಿ ಎಂದು ತಪ್ಪಾಗಿ ಬರೆದವು. ಸರಣಿ ನಂತರ ನಾನು ತಂಡದ ಡ್ರೆಸಿಂಗ್ ರೂಮ್‍ಗೆ ಹೋಗಿದ್ದೆ ಧೋನಿ ನನ್ನ ಬಳಿ ನೀವು ವಿವಾದದಲ್ಲಿ ಸಿಲುಕಲ್ಲಿಲ್ಲ ಆದರೆ ನಾನು ಸಿಲುಕಿದೆ. ಯಾವುದನ್ನ ನಿಮ್ಮ ಹೃದಯಕ್ಕೆ ತೆಗೆದುಕೊಳ್ಳಬೇಡಿ, ವಾಸ್ತವ ಯಾವಗಲೂ ಒಳ್ಳೆಯ ರೀತಿಯಲ್ಲಿ ಬರೋದಿಲ್ಲ ಎಂದು ಧೋನಿ ಹೇಳಿದ್ದರು ಲಕ್ಷ್ಮಣ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ