ಅತ್ಯಾಚಾರ ಪ್ರಕರಣಗಳ ಬಗ್ಗೆ ಹರ್ಯಾಣ ಸಿಎಂ ವಿವಾದಾತ್ಮಕ ಹೇಳಿಕೆ

ಚಂಡೀಘಡ: ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತ ಸಂಬಂಧಗಳೇ ಆಗಿದ್ದು, ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರು ಅತ್ಯಾಚಾರ ಅಸ್ತ್ರದ ಬಳಕೆ ಮಾಡುತ್ತಿದ್ದಾರೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಖಟ್ಟರ್, ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಬಹುತೇಕ ಸುಳ್ಳು ಪ್ರಕರಣಗಳಾಗಿದ್ದು, ಮಹಿಳೆಯರು ತಮ್ಮ ಪರಿಚಿತ ವ್ಯಕ್ತಿಗಳೊಂದಿಗೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಅತ್ಯಾಚಾರ ಅಸ್ತ್ರವನ್ನು ಬಳಸುತ್ತಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅತ್ಯಾಚಾರ, ದೌರ್ಜನ್ಯದ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳಲ್ಲಿ ದೌರ್ಜನ್ಯ ನಡೆದಿರುವುದಿಲ್ಲ. ಅವುಗಳಲ್ಲಿ ಹಲವು ಪ್ರಕರಣಗಳು ಸುಳ್ಳು ಪ್ರಕರಣಗಳಾಗಿರುತ್ತವೆ. ಉದ್ದೇಶ ಪೂರ್ವಕವಾಗಿ ಮಹಿಳೆಯರು ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹುತೇಕ ಒಪ್ಪಿತ ಸಂಬಂಧಗಳೆ ಆಗಿದ್ದು, ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿಲ್ಲ. ಆದರೆ ತಮ್ಮ ಸಂಗಾತಿಯನ್ನು ವಾಪಸ್ ಪಡೆಯಲು ಅಥವಾ ಆತನೊಂದಿಗೆ ಜಗಳವಾದಗ ಮಹಿಳೆಯರು ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡ 80ರಿಂದ90ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ ಮತ್ತು ಆರೋಪಿ ಪರಸ್ಪರ ಪರಿಚಿತರಾಗಿರುತ್ತಾರೆ. ಅವರ ನಡುವಿನ ಸಂಬಂಧ ಏನಾದರೂ ಅಡಚಣೆ ಉಂಟಾದಲ್ಲಿ ಈ ರೀತಿ ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ. ಇದು ಎಫ್​ಐಆರ್​ ಪ್ರಕರಣಗಳಲ್ಲಿ ಬಯಲು ಕೂಡ ಆಗಿದೆ ಎಂದು ಖಟ್ಟರ್ ಹೇಳಿಕೆ ನೀಡಿದ್ದಾರೆ. ಹರ್ಯಾಣ ಸಿಎಂ ಅವರ ಈ ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.

Women Cry Rape To Get Back At Ex-Boyfriends, Says Haryana Chief Minister

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ