ಜನಾರ್ದನರೆಡ್ಡಿ ಬಂಧನದಲ್ಲಿ ಮುಖ್ಯಮಂತ್ರಿ ಕೈವಾಡ: ಬಿಜೆಪಿ ನಾಯಕರ ಆರೋಪ

ಬೆಂಗಳೂರು, ನ.15- ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಬಂಧನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇರ ಕೈವಾಡವಿದೆ ಎಂದು ವಾರ್ಡ್‍ಮಟ್ಟದ ಬಿಜೆಪಿ ನಾಯಕರುಗಳ ಗುಂಪೆÇಂದು ಗಂಭೀರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಾರ್ಡ್‍ಮಟ್ಟದ ನಾಯಕರುಗಳ ಗುಂಪಿನ ಮುಖಂಡ ದಿನೇಶ್ ಗಾಣಿಗ ಮಾತನಾಡಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಸಚಿವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೂ ಆರೋಪಗಳಿವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿಯಾದಾಗ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದರು. ಹಿಂದೂ ಧರ್ಮವನ್ನು ಟೀಕೆ ಮಾಡುವವರನ್ನು ಬಂಧಿಸದೆ ಅಂತಹವರಿಗೆ ಪ್ರಶಸ್ತಿ ಕೊಡುತ್ತಾರೆ. ಹಿಂದೂ ಧರ್ಮ ಪ್ರತಿಪಾದಕ ಕೊಡಗಿನ ಪತ್ರಕರ್ತ ಸಂತೋಷ್‍ನನ್ನು ಬಂಧಿಸಿದ್ದಾರೆ ಎಂದು ಗುಡುಗಿದರು.

ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದರು. ಇದೀಗ ಜನಾರ್ದನರೆಡ್ಡಿಯನ್ನು ಬಂಧಿಸಿದ್ದರು. ಆದರೆ, ಅವರಿಗೆ ನ್ಯಾಯಾಲಯ ಜಾಮೀನು ಕೊಡುವ ಮೂಲಕ ನ್ಯಾಯ ಕೊಟ್ಟಿದೆ. ಇದೆಲ್ಲ ಜೆಡಿಎಸ್-ಕಾಂಗ್ರೆಸ್‍ನವರ ಸೇಡಿನ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಸೇಡಿನ ರಾಜಕಾರಣ ಖಂಡಿಸಿ ಮುಂದಿನ ವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಅಲ್ಲದೆ, ಬೆಳಗಾವಿ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ದಿನೇಶ್ ಗಾಣಿಗ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ