ಇದೇ 18ರಂದು ಸಂಜೆ 4 ಗಂಟೆಗೆ ಧಾರವಾಡ ಕೃಷಿ ವಿವಿಯಲ್ಲಿ ಕನ್ನಡ ರಾಜ್ಯೋತ್ಸವ

ಬೆಂಗಳೂರು, ನ.14- ನಗರದ ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಪ್ರತಿಷ್ಠಾನದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಷ್ಠಾನದ ದ್ವಿಶತಮಾನೋತ್ಸವ ಪ್ರಯುಕ್ತ ತತ್ವ ರಸಾಯನ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ಇದೇ 18ರಂದು ಸಂಜೆ 4 ಗಂಟೆಗೆ ಧಾರವಾಡ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಮುಂಡರಗಿಯ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡದ ಪೀರ್-ಇ- ತಾರೀಖ್ ಹಜರತ್ ಸೈಯದ್ ಶಾ, ಬೌದ್ಧ ಗುರುಗಳಾದ ಪಬ್ ಜೋ ರವಿ ತಪಾಲಿ ವಿಜ್ಯಾ ಮುನಿಯೋ, ಬ್ರಹ್ಮಕುಮಾರಿ ಈಶ್ವರಿ ವಿವಿಯ ರಾಜಯೋಗಿನಿ ಬಿ.ಕೆ.ಜಯಂತಿ, ಬಸವ ಮಾಚಿದೇವ ಮಹಾಸ್ವಾಮೀಜಿ, ಧರ್ಮಾಧ್ಯಕ್ಷರಾದ ರೆವರೆಂಡ್ ರವಿಕಮಾರ್ ನಿರಂಜನ ಸೇರಿದಂತೆ ಹಲವಾರು ಮಠಗಳ ಪೀಠಾಧ್ಯಕ್ಷರು ಸಾನ್ನಿಧ್ಯ ವಹಿಸುವರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಕೇರಳ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ, ಗೌಹಾತಿ ಉಚ್ಚನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರರಾವ್, ನಾಡೋಜ ಪಾಟೀಲ್‍ಪುಟ್ಟಪ್ಪ, ಡಾ.ಚನ್ನವೀರ ಕಣವಿ, ಪೆÇ್ರ. ಚಂದ್ರಶೇಖರಪಾಟೀಲ್, ಇಬ್ರಾಹಿಂ ಸುತಾರ್, ಪಿ.ಜಿ.ಆರ್.ಸಿಂಧ್ಯಾ, ಸಿ.ಎಂ.ಇಬ್ರಾಹಿಂ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಹುಬ್ಬಳಿ-ಧಾರವಾಡ ಮೇಯರ್ ಸುಧೀರ್ ಸರಾಫ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು.

ಇದೇ 16ರಂದು ವಿಜಯನಗರ ಕೇಂದ್ರ ಕನ್ನಡ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ:
ಬೆಂಗಳೂರು, ನ.14- ವಿಜಯನಗರ ದೂರವಾಣಿ ಕೇಂದ್ರ ಕನ್ನಡ ಕಲಾ ಸಂಘ ಮತ್ತು ಮನರಂಜನಾ ಕೂಟದ ವತಿಯಿಂದ ಇದೇ 16ರಂದು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ ಕೇಂದ್ರದ ಆವರಣದಲ್ಲಿ ಧ್ವಜಾರೋಹಣವನ್ನು ಬೆಂಗಳೂರು ದೂರಸಂಪರ್ಕ ಜಿಲ್ಲೆ ಮಹಾಪ್ರಬಂಧಕ ಜಿ.ವೆಂಕಟೇಶ್ವರಲು ನೆರವೇರಿಸುವರು.
ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ವಲಯ ಮುಖ್ಯಮಹಾಪ್ರಬಂಧಕ ಆರ್.ಮಣಿ ಉದ್ಘಾಟಿಸುವರು ಮುಖ್ಯ ಅತಿಥಿಗಳಾಗಿ ಇತಿಹಾಸ ತಜ್ಞ ಸುರೇಶ್ ಮೂನ, ಬೆಂಗಳೂರು ದೂರ ಸಂಪರ್ಕ ಜಿಲ್ಲೆ ಪ್ರಧಾನ ಮಹಾಪ್ರಬಂಧಕ ಎನ್.ಜನಾರ್ಧನ್‍ರಾವ್, ಉಪ ಮಹಾಪ್ರಬಂಧಕರಾದ ರಘುನಾಥ್ ಬಿ.ಜೋಶಿ, ಗಣಪತಿ ಎಂ.ಭಟ್, ಎಚ್.ವಿ.ಪ್ರಸಾದ್, ಆರ್.ಎಸ್.ಉಮಾ, ಕನ್ನಡ ಕಲಾ ಸಂಘದ ಅಧ್ಯಕ್ಷರಾದ ಕೆ.ಎಸ್.ಹಂಡ್ರಗಲ್, ಮುಖ್ಯಲೆಕ್ಕಾಧಿಕಾರಿಗಳಾದ ಚಂದ್ರವಳ್ಳಿ, ಮಂಜುನಾಥ್ ಮತ್ತಿತರರು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ